ಸಮಗ್ರ ಸುದ್ದಿ
ಮಂಗಳೂರು : ಪ್ರಖ್ಯಾತ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ .
ಮಂಗಳೂರು : ಶೆರ್ ಲಾಕ್ ಪಬ್ ನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪುತ್ತೂರಿನ ನಾಲ್ವರು ಯುವಕರು ಬಂಧನವಾಗಿದೆ.
ಘಟನೆ ಆ.3 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 22 ವರ್ಷದ ಯುವತಿ ತನ್ನ ಸ್ನೇಹಿತೆಯೊಂದಿಗೆ ಮಂಗಳೂರು ನಗರದ ಪಾಂಡೇಶ್ವರ ಫೊರಮ್ ಮಾಲ್ ನಲ್ಲಿರುವ ಶೆರ್ ಲಾಕ್ ಪಬ್ ಗೆ ಹೋಗಿದ್ದು, ರಾತ್ರಿ 10.30ರ ಸುಮಾರಿಗೆ ಆರೋಪಿಗಳು ದೂರುದಾರೆ ಯುವತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಶೀಲಭಂಗ ಮಾಡುವ ಉದ್ದೇಶದಿಂದ ದೂರುದಾರೆಯ ಎದೆಯ ಭಾಗಕ್ಕೆ ಕೈ ಮುಟ್ಟಿ ಹಾಗೂ ಆಕೆಯ ಸ್ನೇಹಿತೆಯ ಮಾನಕ್ಕೆ ಕುಂದುಂಟು ಮಾಡುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಬೀಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಪುತ್ತೂರು ನೆಹರುನಗರದ ಶಿವಕೀರ್ತಿ ನಿಲಯ ಶಿವನಗರದ 33 ವರ್ಷದ ವಿನಯ, ಶಿವನಗರದ 22 ವರ್ಷದ ಮಹೇಶ್, ನೆಲಪ್ಪಾಲದ 34 ವರ್ಷದ ಪ್ರಿತೇಶ್, ನೆಲಪ್ಪಾಲದ 33 ವರ್ಷದ ನಿತೇಶ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.