ಇದು ಎಂಥಾ ಲೋಕವಯ್ಯಾ, ಬಾಳಿಗಾ ಮಿಸ್ಟ್ರಿ ಮರ್ಡರ್ ಕಥೆಯಾ?
ಸಿನೆಮಾ : ಕಾಂತಾರ ಸಿನೆಮಾ ಸೂಪರ್ ಹಿಟ್ ಆದ ನಂತರ ಮಂಗಳೂರಿನ ನೆಲದ ಮೂರು ಸಿನೆಮಾಗಳು ಈಗ ಸಿನೆಮಾ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುತ್ತವೆ ಮಾಡಿದೆ. ಅದರಲ್ಲಿ ಒಂದು ಅಗಸ್ಟ್ 9 ಕ್ಕೆ ಬಿಡುಗಡೆಯಾಗಲಿರುವ “ಇದು ಎಂಥಾ ಲೋಕವಯ್ಯಾ” ಅದರೊಂದಿಗೆ “ಬಾಳಿಗಾ ಮರ್ಡರ್ ಮಿಸ್ಟ್ರಿ” ಮತ್ತು ಮೂರನೇಯದು “ಕಂಬಳ”.
ಈಗಾಗಲೇ ಸಂಪೂರ್ಣ ಚಿತ್ರೀಕರಣಗೊಂಡು ತೆರೆಗೆ ಬರಲು ಸಿದ್ಧವಾಗಿರುವ ಇದು ಎಂಥಾ ಲೋಕವಯ್ಯಾ ಸಿನೆಮಾವನ್ನು ಪ್ರಥಮ ಬಾರಿ ನಿರ್ಮಾಪಕವಾಗಿರುವ ಮಂಗಲ್ಪಾಡಿ ನರೇಶ್ ಶೆಣೈಯವರು ನಿರ್ಮಿಸಿದ್ದಾರೆ. ಈ ಸಿನೆಮಾ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದರೆ ಅದರ ಪ್ರಥಮ ಕಾಪಿ ವೀಕ್ಷಿಸಿದ ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ, ಚಿತ್ರಕಥೆ ರಚನೆಗಾರ, ನಟ ಜಿಯೋ ಬೇಬಿ ಅದನ್ನು ಮೆಚ್ಚಿ ಸಿನೆಮಾ ತಂಡದೊಂದಿಗೆ ಕೈಜೋಡಿಸಿದ್ದಾರೆ. ಕಂಬಳ ಸಿನೆಮಾ ಕೋಣಗಳ ಮೇಲೆ ಚಿತ್ರೀಕರಣವಾಗಿದ್ದರೆ, ಎಂಥಾ ಲೋಕವಯ್ಯಾ ಸಿನೆಮಾ ನಮ್ಮ ನಿಮ್ಮ ಮನೆಯ ಸದಸ್ಯನಂತರಿರುವ ಮಾರ್ಜಾಲದ ಸುತ್ತಮುತ್ತ ತಿರುಗುತ್ತದೆ. ಮೂಢನಂಬಿಕೆಯನ್ನು ಹಾಸ್ಯದ ತೋರಣದಲ್ಲಿ ಕಟ್ಟಿಕೊಟ್ಟು, ಸಾಮಾಜಿಕ ಕಥೆಯನ್ನು ಪಾತ್ರಗಳ ಪ್ರಬುದ್ಧ ನಟನೆಯ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಒಂದು ಮೊಟ್ಟೆಯ ಕಥೆ ಸಿನೆಮಾದ ಯಶಸ್ಸಿಗೆ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿತೇಶ್ ಸಿ ಗೋವಿಂದ್ ಯಶಸ್ವಿಯಾಗಿದ್ದಾರೆ.
ಜು.16ರಿಂದ ಪುತ್ತೂರಿನ ಇನ್ ಫಿನಿಟಿ ಬ್ಯೂಟಿ ಕೇರ್ ನಲ್ಲಿ “ಬೇಸಿಕ್ ಮೇಕ್ಅಪ್”,”ಸಾರಿ ಡ್ರಾಪಿಂಗ್ ” ಮತ್ತು “ಹೇರ್ ಸ್ಟೈಲ್ ” ಕೋರ್ಸ್ ಆರಂಭ.
ಈ ಸಿನೆಮಾ ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಮೂಲಕ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸುತ್ತಿದ್ದು, ಈ ನಡುವೆ ಬಾಳಿಗಾ ಮರ್ಡರ್ ಮಿಸ್ಟ್ರಿ ಎನ್ನುವ ಇನ್ನೊಂದು ಸಿನೆಮಾದ ಪೋಸ್ಟರ್ ಹೊರಬಂದಿದೆ. ಬಾಳಿಗಾ ಸಿನೆಮಾ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರ ಹತ್ಯೆಯ ಸುತ್ತ ಹೆಣೆಯಲಾಗಿದೆ ಎಂದು ಅಲ್ಲಲ್ಲಿ ಸಣ್ಣಮಟ್ಟದಲ್ಲಿ ಸುದ್ದಿಗಳು ಹರಿದಾಡುತ್ತಿವೆ. 2016 ರಲ್ಲಿ ವಿನಾಯಕ ಬಾಳಿಗಾ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತನ ಹತ್ಯೆಯಾಗಿತ್ತು. ಅದರಲ್ಲಿ ನರೇಶ್ ಶೆಣೈ ಆರೋಪಿಯಾಗಿದ್ದಾರೆ. ಹಾಗಾದರೆ ಬಾಳಿಗಾ ಹೆಸರಿನ ಸಿನೆಮಾದಲ್ಲಿ ನರೇಶ್ ಶೆಣೈಯನ್ನು ಯಾವ ರೀತಿ ಚಿತ್ರಿಸಬಹುದು ಎನ್ನುವ ಕುತೂಹಲ ಇದೆ. ಹಾಗಾದರೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಲಪಂಥಿಯ ಮತ್ತು ಎಡಪಂಥಿಯ ಎಂದು ಎರಡು ಸಿದ್ಧಾಂತಗಳ ವಾರ್ ಶುರುವಾದರೂ ಆಶ್ಚರ್ಯ ಇಲ್ಲ. ಹಿಂದಿ ಸಿನೆಮಾರಂಗದಲ್ಲಿ ರೈಟ್ ವಿಂಗ್ ಆಧಾರಿತ ಸಿನೆಮಾಗಳು ಬಂದಾಗ ಅವುಗಳಿಗೆ ಸಮಾಜದ ಮತ್ತೊಂದು ವರ್ಗದಿಂದ ವಿರೋಧಗಳು ಬಂದಿದ್ದವು. ಟೀಕೆ ಟಿಪ್ಪಣಿಗಳು ಕಾಡಿದ್ದವು. ಇದು ಎಂಥಾ ಲೋಕವಯ್ಯಾ ಸಿನೆಮಾವನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಈಗ ಇರುವ ಪ್ರಶ್ನೆ.
ಇದು ಎಂಥಾ ಲೋಕವಯ್ಯಾ ಸಿನೆಮಾ ಬಿಡುಗಡೆಯ ಹೊತ್ತಿನಲ್ಲಿ ಬಾಳಿಗಾ ಸಿನೆಮಾದ ಪೋಸ್ಟರ್ ಹರಿಯಬಿಟ್ಟು ಕೆಲವರು ಎಂಥಾ ಲೋಕ ಸಿನೆಮಾದ ಬಗ್ಗೆ ಕಾತರ ಹೆಚ್ಚಿಸಿದ್ದಾರೆ. ಇನ್ನು ಇದು ಎಂಥಾ ಲೋಕವಯ್ಯಾ ಸಿನೆಮಾ ನರೇಶ್ ಶೆಣೈಯವರ ಬದುಕಿನ ಘಟನೆಗಳಾ? ಬಾಳಿಗಾ ಪ್ರಕರಣದ ಬಗ್ಗೆ ಅವರ ಆಯಾಮವಾ? ಎನ್ನುವ ಕುತೂಹಲಗಳು ಕೂಡ ಗರಿಗೆದರುತ್ತಿವೆ. ಒಟ್ಟಿನಲ್ಲಿ ಬಾಳಿಗಾ ಸಿನೆಮಾದ ಚಿತ್ರೀಕರಣದ ಯಾವಾಗ ಶುರುವಾಗುತ್ತೆ ಎನ್ನುವ ಯಾವ ಮಾಹಿತಿಯೂ ಚಿತ್ರತಂಡದಿಂದ ಹೊರಗೆ ಬಂದಿಲ್ಲ. ಇದು ಎಂಥಾ ಲೋಕವಯ್ಯಾ ಸಿನೆಮಾ ಮಾತ್ರ ಇದೇ ಅಗಸ್ಟ್ 9 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.