ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿ – ಹೊತ್ತಿ ಉರಿದ ಬೋಗಿಗಳು.
ಚೆನ್ನೈ: ಮೈಸೂರಿನಿಂದ ದರ್ಭಾಂಗ್‌ಗೆ (Mysuru-Darbhang) ತೆರಳುತ್ತಿದ್ದ ಭಾಗಮತಿ ಎಕ್ಸ್‌ಪ್ರೆಸ್ (Bagamathi Express) ರೈಲು, ಚೆನ್ನೈ (Chennai) ಸಮೀಪದ ಕವರೈಪೆಟ್ಟೈ (Kavaraipettai) ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಎರಡು ಬೋಗಿಗಳು ಹೊತ್ತಿ ಉರಿದಿವೆ.
ಶುಕ್ರವಾರ ಮೈಸೂರಿನಿಂದ ದರ್ಭಾಂಗ್‌ಗೆ ಭಾಗಮತಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಸುತ್ತಿತ್ತು. ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಭಾಗಮತಿ ಎಕ್ಸ್‌ಪ್ರೆಸ್ರೈಲಿನ ಆರು ಬೋಗಿಗಳು ಹಳಿತಪ್ಪಿದ್ದು, 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ತಿರುವಳ್ಳೂರು (Tiruvallur) ಜಿಲ್ಲಾಧಿಕಾರಿ ಟಿ.ಪ್ರಭುಶಂಕರ್ ಮಾತನಾಡಿ, ರಕ್ಷಣಾ ಕಾರ್ಯಚಾರಣೆ ನಡೆಯುತ್ತಿದ್ದು, ಸಾವು-ನೋವಿನ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭಿಸಿಲ್ಲ ಎಂದು ತಿಳಿಸಿದ್ದಾರೆ. ರೈಲು ಹಳಿ ತಪ್ಪಿರುವುದು ಈ ಅವಘಡಕ್ಕೆ ಕಾರಣವಾಗಿರಬಹುದು. ಲೂಪ್ ಲೈನ್ ಪ್ರವೇಶಿಸಿ ಬಳಿಕ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.