ರಾಜ್ಯ

ರಾಜ್ಯಾದ್ಯಂತ ನಾಳೆಯಿಂದ (ಮೇ.29)ಶಾಲೆಗಳು(school) ಪ್ರಾರಂಭ.

Click below to Share News

ಬೆಂಗಳೂರು : ಮೇ. 29ರ ನಾಳೆಯಿಂದ 2024-25 ಸಾಲಿನ ಶಾಲೆಗಳು(school) ಪ್ರಾರಂಭವಾಗಲಿದ್ದು, 2024-25 ನೇ ಸಾಲಿನಲ್ಲಿ ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಮತ್ತು ಕ್ಷೀರಭಾಗ್ಯ ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢಶಾಲೆಗಳ 1-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಕೈಗೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25 ನೇ ಸಾಲಿನಲ್ಲಿ ಪಿ.ಎಂ.ಪೋಷಣ್(ಮಧ್ಯಾಹ್ನ ಉಪಾಹಾರ ಯೋಜನ), ಕ್ಷೀರಭಾಗ್ಯ ಯೋಜನೆ ಪೂರಕ ಪೌಷ್ಠಿಕ ಆಹಾರ ವಿತರಣೆಯನ್ನು ವಾರ್ಷಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಬಿಸಿಯೂಟದೊಂದಿಗೆ ದಿನಾಂಕ 29.05.2024 ರಿಂದ ಪ್ರಾರಂಭಿಸುವುದು.

ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆಯೊಂದಿಗೆ ಸಂಭ್ರಮದಿಂದ ಬಿಸಿಯೂಟ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ ಈ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

1. ಶಾಲಾ ಹಂತದಲ್ಲಿ ಪೂರ್ವಸಿದ್ದತೆಯ ನಿರ್ವಹಣೆಯಲ್ಲಿ ಮುಖ್ಯಶಿಕ್ಷಕರ ಜವಾಬ್ದಾರಿಯ ಬಗ್ಗೆ :

1.1 ಮುಖ್ಯ ಶಿಕ್ಷಕರು ಏಪ್ರಿಲ್-ಮೇ-2024 ರ ಬೇಸಿಗೆ ರಜಾ ಅವಧಿಯಲ್ಲಿ ಶಾಲೆಗಳಲ್ಲಿ ಉಳಿಕೆ ಇರುವ ಆಹಾರ ಧಾನ್ಯಗಳಾಧ ಅಕ್ಕಿ, ಗೋಧಿ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಹಾಲಿನ ಪುಡಿ, ಹಾಗೂ ಇತರೆ ಆಹಾರ ಪದಾರ್ಥಗಳು ಉಳಿಕೆಯಾಗಿದ್ದಲ್ಲಿ ಪರಿಶೀಲಿಸಿ 10.04.2024 ರ ಅಂತ್ಯಕ್ಕೆ ದಾಸ್ತಾನಿಗೆ ತೆಗೆದುಕೊಂಡು ದಾಸ್ತಾನು ವಹಿಯಲ್ಲಿ ಉಳಿಕೆ ಪ್ರಮಾಣವನ್ನು ನಮೂದಿಸಿ ದಾಖಲಿಸಿ ದೃಢೀಕರಿಸುವುದು.

1.2 ಶಾಲಾ ದಾಸ್ತಾನಿನಲ್ಲಿರುವ ಆಹಾರ ಪದಾರ್ಥಗಳು ಕೆಡದಂತೆ, ಹುಳಹಿಡಿಯದಂತೆ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಪಾಲಿಸಿ ಸುರಕ್ಷಿತವಾಗಿ ಇಡಲು ಕ್ರಮವಹಿಸುವುದು. ಆಹಾರ ಧಾನ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಾರಕ್ಕೊಮ್ಮೆ ದಾಸ್ತಾನು ಕೊಠಡಿಗೆ ಭೇಟಿ ನೀಡಿ Deep-Cleaning ಮಾಡಿಸಿ ಸ್ವಚ್ಛತೆ ಕಾಪಾಡುವುದು.

1.3 ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಹಾಕಿ ಕಳಪೆಯಾಗದಂತೆ ನೋಡಿಕೊಳ್ಳುವುದು..

1.4 ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಮಳೆ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಲು ನೆಲದ ಮೇಲೆ ಪ್ಲಾಸ್ಟಿಕ್/ಮರದ ಮಣೆಗಳನ್ನು ಬಳಸಿ ಅದರ ಮೇಲೆ ಆಹಾರ ಧಾನ್ಯಗಳ ಮೂಟೆಗಳನ್ನು ಜೋಡಿಸುವುದು. ಹೀಗೆ ಜೋಡಿಸುವಾಗ ಮೂಟೆಗಳು ಗೋಡೆಗೆ ತಗಲದಂತೆ ಸುತ್ತಲೂ ಒಂದು ಅಡಿ ಅಂತರವನ್ನು ಕಾಯ್ದುಕೊಳ್ಳುವುದು. ಅಡುಗೆ ಕೋಣೆಗಳಲ್ಲಿ ಇಲಿಗಳು ಬರದಂತೆ ಬೋನುಗಳನ್ನು ಇಟ್ಟು Pest-Control ಕ್ರಮಗಳನ್ನು ಅನುಸರಿಸುವುದು. ಗೋಡೆಗಳನ್ನು ಸ್ವಚ್ಛಗೊಳಿಸಿ ಜಾಡ ತೆಗೆದು, ಹಲ್ಲಿ, ಜಿರಲೆ, ನೊಣಗಳು ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಿಟಕಿ, ಎಕ್ಸಾಸ್ಟ್ ಫ್ಯಾನ್ ಇರುವ ಜಾಗದಲ್ಲಿ ಕಬ್ಬಿಣದ ಮೆಶ್ ಹಾಕಿಸಿ ಹೊರಗಿನಿಂದ ಯಾವುದೇ ಕ್ರಿಮಿ- ಕೀಟಗಳು ಬರದಂತೆ ಭದ್ರಪಡಿಸುವುದು.

1.5 ಶಾಲೆಯಲ್ಲಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು FIFO ಮತ್ತು FEFO ಪದ್ಧತಿಯಲ್ಲಿ ಬಳಸುವುದು.ಅವಧಿ ಮುಗಿದ ಪದಾರ್ಥಗಳನ್ನು ಬಿಸಿ ಊಟದಲ್ಲಿ ಬಳಸುವಂತಿಲ್ಲ. ಆಹಾ ರ ಪದಾರ್ಥಗಳ ಪ್ಯಾಕೇಟ್ ಮತ್ತು ಮೂಟೆಗಳ ಮೇಲೆ ಯಾವ ದಿನದಂದು ಆಹಾರ ಪದಾರ್ಥಗಳನ್ನು ದಾಸ್ತಾನಿನಲ್ಲಿಡಲಾಗಿದೆ ಎಂಬ ಮಾಹಿತಿಗೆ ಅನುಗುಣವಾಗಿ ದಿನಾಂಕವನ್ನು ನಮೂದಿಸುವುದು. ಇದರಂತೆ ಪರಿಶೀಲಿಸಿ ಅವಧಿಯಿರುವ ಪದಾರ್ಥಗಳನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ಮುಖ್ಯ ಅಡುಗೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

1.6 ಕಳಪೆಯಾದ, ಹುಳ ತಿಂದ, ಗುಣಮಟ್ಟ ಹಾಳಾಗಿರುವ, ಕೊಳೆತಿರುವ ಆಹಾರ ಧಾನ್ಯಗಳು, ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರ ಹಾಕುವುದು ಹಾಗೂ ಬಳಸದಂತೆ ನೋಡಿಕೊಳ್ಳುವುದು.

1.7 ಶಾಲೆಯಲ್ಲಿ ದಾಸ್ತಾನು ಇಟ್ಟಿರುವ ಆಹಾರ ಧಾನ್ಯಗಳು, ಪದಾರ್ಥಗಳು, ಪಾತ್ರೆ- ಪರಿಕರಗಳು, ಸ್ಟವ್ – ಗ್ಯಾಸ್ ಸಿಲಿಂಡರ್‌ಗಳು ಇರುವ ಅಡುಗೆ ಕೋಣೆ, ಉಗ್ರಾಣವನ್ನು ಬೇಸಿಗೆ ರಜೆಯಲ್ಲಿ ಸರಿಯಾಗಿ ಬೀಗ ಹಾಕಿ ಭದ್ರಪಡಿಸುವುದು. ಶಾಲೆಗೆ ಆಗಾಗ್ಗೆ ಭೇಟಿ ಕೊಟ್ಟು ಉಗ್ರಾಣ ಹಾಗೂ ಅಡುಗೆ ಕೋಣೆ ಪರಿಶೀಲನೆ ನಡೆಸುವುದು. ಸುರಕ್ಷತೆಯ ಬಗ್ಗೆ
ಬೇಜವಾಬ್ದಾರಿ ತೋರದಂತೆ, ಹಾಗೂ ಕಳ್ಳತನವಾಗುವುದಕ್ಕೆ ಅವಕಾಶವಾಗದಂತೆ ಸೂಕ್ತ ಕ್ರಮವಹಿಸುವುದು. ದಾಸ್ತಾನು ಕೊಠಡಿಯನ್ನು ಸುರಕ್ಷಿತವಾಗಿ ಸೂಕ್ತ ಕ್ರಮಗಳಿಂದ ಭದ್ರಪಡಿಸಿ ಆಹಾರ ಪದಾರ್ಥಗಳು ಅಪವ್ಯಯವಾಗದಂತೆ ನೋಡಿಕೊಳ್ಳುವುದು ಮುಖ್ಯಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.

1.8 ಅಡುಗೆ ಕೋಣೆಯಲ್ಲಿ ಇಡಲಾಗಿರುವ ಅಗ್ನಿ ನಂದಕದ ಬಳಕೆಯ ವಾಯಿದೆಯ ಅವಧಿಯನ್ನು ಪರಿಶೀಲಿಸಿ ಅವಧಿ ಮುಗಿದಿದ್ದಲ್ಲಿ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ Refilling ಮಾಡಿಸಿ ದಿನಾಂಕ ನಮೂದಿಸಿ ಸುಸ್ಥಿತಿಯಲ್ಲಿಡುವಂತೆ ಕ್ರಮವಹಿಸುವುದು.

1.9 ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿ ಶಾಲೆಯಲ್ಲಿರುವ ನೀರಿನ ಸಂಪು, ನೀರಿತ ತೊಟ್ಟಿ, ಓವರ್ ಹೆಡ್ ಟ್ಯಾಂಕ್ ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬುವುದು ಹಾಗೂ ನಲ್ಲಿ, ಪೈಪ್ ಗಳು ಕೆಟ್ಟು ಹೋಗಿದ್ದಲ್ಲಿ ಅಗತ್ಯ ರಿಪೇರಿಯನ್ನು (ಹೊಸ ಪರಿಕರಗಳನ್ನು ಖರೀದಿಸಿ) ಮಾಡಿಸಿ ನೀರಿನ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು. ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ದಾನಿಗಳು, ಕಂಪನಿಗಳು, ಜನಪ್ರತಿನಿಧಿಗಳ ಅನುದಾನದಿಂದ ಸಹಾಯ ಪಡೆದು RO-Drinking Water Filter ಅಳವಡಿಸಿಕೊಳ್ಳುವುದು. ಈಗಾಗಲೇ ಶಾಲೆಯಲ್ಲಿ ಬಳಸುತ್ತಿರುವ ವಾಟರ್ ಫಿಲ್ಟರ್ ಗಳ ಗುಣಮಟ್ಟ ಕಳಪೆಯಾಗಿದ್ದಲ್ಲಿ ಇಲ್ಲವೇ ಕೆಟ್ಟುಹೋಗಿದ್ದಲ್ಲಿ ಕೂಡಲೇ ಶಾಲಾ ಉಳಿಕೆ ಅನುದಾನದಿಂದ ರಿಪೇರಿ ಮಾಡಿಸುವುದು.

1.10 ಅಡುಗೆ ಕೋಣೆಯಲ್ಲಿ ಮತ್ತು ಉಗ್ರಾಣದಲ್ಲಿ ಗಾಜಿನ ಬಲ್ಬುಗಳನ್ನು ಅಳವಡಿಸದೇ ಎಲ್.ಇ.ಡಿ. ಬಲ್ಬುಗಳನ್ನು ಅಳವಡಿಸುವುದು, ಅಡುಗೆ ಕೋಣೆಗಳ ಒಳಗೋಡೆಗಳನ್ನು White wash / Bright coloured painting ಮಾಡಿಸಿ ಸ್ವಚ್ಛಗೊಳಿಸುವುದು. ಹೊರಗೋಡೆಯಲ್ಲಿ ಪಿ.ಎಂ. ಪೋಷಣ್ ಶಿರೋನಾಮೆ, ಮದ್ಯಾಹ್ನ ಉಪಾಹಾರ ಯೋಜನೆಯ ಲೋಗೋ ಚಿಹ್ನೆಗಳನ್ನು ಬಣ್ಣದಲ್ಲಿ ಆಕರ್ಷಣೀಯವಾಗಿ ಕಾಣುವಂತೆ ಬರೆಸುವುದು.

1.11 ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಅಡುಗೆ ಕೋಣೆ ಸ್ವಚ್ಛತಾ ಪರಿಕರಗಳನ್ನು, ಕೈತೊಳೆಯುವ ಸಾಬೂನು, ಪಾತ್ರೆಪರಿಕರಗಳನ್ನು ಸ್ವಚ್ಛಗೊಳಿಸುವ ಸೋಪ್ ಆಯಿಲ್, ನೆಲ ಸ್ವಚ್ಛಗೊಳಿಸಲು ಪೆನಾಯಿಲ್, ಮುಂತಾದ ಸ್ಥಾನಟ್ರೈಸರ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನುಗೊಳಿಸಿ ಬಳಸುವುದು.

1.12 ಅಡುಗೆ ಸಿಬ್ಬಂದಿ ತಮ್ಮ ಸೇವಾವಧಿಯನ್ನು 60 ವರ್ಷಗಳಿಗೆ ಪೂರ್ಣ ಗೊಳಿಸಿ ನಿವೃತ್ತಿಹೊಂದಿದ್ದಲ್ಲಿ, ಸದರಿ ಖಾಲಿ ಸ್ನಾನಕ್ಕೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಹೊಸ ಅಡುಗೆಯವರನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳುವ ಕ್ರಮವಹಿಸಿ ಬಿಸಿಯೂಟ ಕೆಲಸಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು. ಅವರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳುವುದು. ಹಾಗೂ ಇಲಾಖೆಗೆ ಮಾಹಿತಿ ನೀಡಿ ಡಿಬಿಟಿ ಮೂಲಕ ಮಾಸಿಕ ವೇತನ ಬಿಡುಗಡೆಗೆ ಅಗತ್ಯ ಕ್ರಮವಹಿಸುವುದು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!