ತಾಲೂಕು ಸುದ್ದಿ
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರದ ತಂಡ: ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನೆ.
ಪುತ್ತೂರು: ಅ 4 ರಿಂದ 6 ರವರೆಗೆ ಗುಜರಾತಿನ ಸರಸ್ವತಿ ವಿಜ್ಞಾನ ವಿಹಾರ್ ಆದಿಪುರದ ನಲ್ಲಿ ನಡೆದ ವಿದ್ಯಾಭಾರತೀಯ ರಾಷ್ಟ್ರೀಯ ಖೋ-ಖೋ ಪಂದ್ಯಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪುತ್ತೂರಿಗೆ ಆಗಮಿಸಿದ ತಂಡದ ವಿದ್ಯಾರ್ಥಿಗಳಿಗೆ ತರಬೇತಿದಾರರಿಗೆ ಮತ್ತು ವ್ಯವಸ್ಥಾಪಕರ ಸಾಧನೆಯನ್ನು ಮೆಚ್ಚಿ ಪುತ್ತೂರಿನ ಪ್ರತಿಷ್ಠಿತ ಖೋ-ಖೋ ಕ್ಲಬ್ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಮತ್ತು ಸದಸ್ಯರಾದ ಋತ್ವಿಕ್ ಪವನ್, ಭರತ್, ಪವಿತ್ ಇವರು ಪುತ್ತೂರಿನ ರೈಲ್ವೆ ಸ್ಟೇಷನ್ ನಲ್ಲಿ ತಂಡವನ್ನು ಸ್ವಾಗತಿಸಿ ಅಭಿನಂದನೆಯನ್ನು ತಿಳಿಸಿರುತ್ತಾರೆ.