ತಾಲೂಕು ಸುದ್ದಿ
ದೊಡ್ಡಡ್ಕ:ಕುಟುಂಬ ಪ್ರಬೋಧನ್ ಕರ್ನಾಟಕ ದಕ್ಷಿಣ ಇದರ ಸಹಯೋಗದಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ವತಿಯಿಂದ “ಭಜನ್ ಸಂಧ್ಯಾ”ಕಾರ್ಯಕ್ರಮ
ದೊಡ್ಡಡ್ಕ: ಕುಟುಂಬ ಪ್ರಬೋಧನ್ ಕರ್ನಾಟಕ ದಕ್ಷಿಣ ಇದರ ಸಹಯೋಗದಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ವತಿಯಿಂದ “ಭಜನ್ ಸಂಧ್ಯಾ”ಕಾರ್ಯಕ್ರಮ.
ಪ್ರತಿ ತಿಂಗಳ ಹುಣ್ಣಿಮೆ ದಿನದಂದು ಪ್ರತಿ ಮನೆಯಲ್ಲಿ 1 ಗಂಟೆಯ ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಜೂನ್ 3ನೇ ಶನಿವಾರ ದೊಡ್ಡಡ್ಕ ಈಶ್ವರ ನಾಯ್ಕ ಇವರ ಮನೆಯಲ್ಲಿ ಭಜನಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮನೆಯ ಸದಸ್ಯರ ಜೊತೆಗೆ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು, ಭಜನಾ ಕಾರ್ಯಕ್ರಮ ಮುಗಿದ ಬಳಿಕ ಭಜನಾ ಶಿಬಿರರ್ಥಿ ಮನೀಶ್ ಇವರ ಹುಟ್ಟುಹಬ್ಬ ವನ್ನು ಹಿಂದೂ ಸಂಪ್ರದಾಯ ಪ್ರಕಾರ ಆಚರಿಸಿ ಕಾರ್ಯಕ್ರಮ ಸಂಪನ್ನ ಗೊಂಡಿತು.