ಸೆ.15 ರಿಂದ ಸೆ. 19ರ ತನಕ ಇತಿಹಾಸ ಪ್ರಸಿದ್ಧ ಸುಳ್ಳಮಲೆ ಗುಹಾ ತೀರ್ಥ ಸ್ನಾನ.
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಸುಳ್ಳಮಲೆ -ಬಲ್ಲಮಲೆ ಎನ್ನುವ ಅರಣ್ಯದ ಕಾಲುದಾರಿಯಲ್ಲಿ ಸ್ವಲ್ಪ ದೂರ ನಡೆದಾಗ ಗುಹೆಯ ಒಳಗೆ ಪವಿತ್ರ ತೀರ್ಥ ಹರಿಯುವ ಕ್ಷೇತ್ರ ಸಿಗುತ್ತದೆ. ಅದುವೇ ಸುಳ್ಳಮಲೆ ಪುಣ್ಯ ತೀರ್ಥ.
ಇತಿಹಾಸ ಪ್ರಸಿದ್ಧ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಸೋಣ ಅಮವಾಸ್ಯೆಯಂದು ತೀರ್ಥ ಸ್ನಾನಕ್ಕೆ ಬಿದಿರಿನ ಕೇರ್ಪು(ಏಣಿ ) ಇಡುವ ಸಂಪ್ರದಾಯದಂತೆ ಸೆ.15ರಂದು ಗುಹಾ ತೀರ್ಥ ಆರಂಭಗೊಂಡು ಸೆ.19ರ ಶುಕ್ಲ ಪಕ್ಷದ ಚೌತಿಯವರೆಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ಇರುತ್ತದೆ.
ವರ್ಷದಲ್ಲಿ ನಾಲ್ಕು ದಿನ ಮಾತ್ರ ಪ್ರವೇಶ.
ವರ್ಷದಲ್ಲಿ ನಾಲ್ಕು ದಿನ ಮಾತ್ರ ಈ ಗುಹಾಲಯವಿರುವ ಪ್ರದೇಶಕ್ಕೆ ಪ್ರವೇಶ . ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ, ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.
Read more..
One Comment