ತಾಲೂಕು ಸುದ್ದಿ

ವಿಟ್ಲ : ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ.

Click below to Share News

ವಿಟ್ಲ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ನಡೆದಿದೆ.
ಸುಳ್ಯ ಬೀರಮಂಗಳ ನಿವಾಸಿ ಎನ್.ಎಂ. ಮಹಮ್ಮದ್ ಕಲಂದರ್ ಶಾ (36) ಬಂಧಿತ ಆರೋಪಿ.

ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್.ಇ ರವರು ಜೀಪು ಚಾಲಕ ಸಂತೋಷ್ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ಶ್ರೀಧರ, ಪಿಸಿ ಹೇಮರಾಜ್ ಮತ್ತು ಪಿಸಿ ಅಶೋಕರವರ ಜೊತೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿಗೆ ತಲುಪಿ ಕಾಂಞಂಗಾಡು-ಕಲ್ಲಡ್ಕ ಹೆದ್ದಾರಿಯ ಬದಿಯಲ್ಲಿ ಇಲಾಖಾ ಜೀಪನ್ನು ನಿಲ್ಲಿಸಿ ಸಿಬ್ಬಂದಿಗಳೊಂದಿಗೆ ಹೆದ್ದಾರಿಯಲ್ಲಿ ಹೋಗುತ್ತಿರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅಡ್ಯನಡ್ಕ ಕಡೆಯಿಂದ ಬಂದ ಅಟೋರಿಕ್ಷಾವೊಂದನ್ನು ಸಿಬ್ಬಂದಿಗಳು ನಿಲ್ಲಿಸುವಂತೆ ಸೂಚನೆ ನೀಡಿದರೂ ಚಾಲಕನು ಆಟೋರಿಕ್ಷಾವನ್ನು ನಿಲ್ಲಿಸದೆ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ಆಟೋರಿಕ್ಷಾದಿಂದ ಇಳಿದು ಓಡಿ ಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಹಿಡಿದು ಕರೆದುಕೊಂಡು ಬಂದು ವಿಚಾರಿಸಿದಾಗ ಆರೋಪಿ ತಾನು ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಿಸುತ್ತಿರುವುದಾಗಿ ತಿಳಿಸಿದ್ದು, ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ 6.110 ಕೆ ಜಿ ತೂಕದ ಅಂದಾಜು 45000/- ರೂಪಾಯಿ ಮೌಲ್ಯದ ಗಾಂಜಾ, ಎರಡು ಮೊಬೈಲ್ ಫೋನ್ (ಅಂದಾಜು ಮೌಲ್ಯ 1000/-ರೂ) ಹಾಗೂ 900/- ರೂಪಾಯಿ ನಗದು, ಚಾಲಕನ ಚಾಲನಾ ಪರವಾನಿಗೆ ಪತ್ತೆಯಾಗಿದೆ.
ಸೊತ್ತುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ 1,60,000/- ರೂ. ಮೌಲ್ಯದ ಆಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಿಕ್ಷಾದಲ್ಲಿದ್ದ 6.110 ಕೆ ಜಿ ತೂಕದ ಗಾಂಜಾ ಅಂದಾಜು ಮೌಲ್ಯ 1,35,000/- ರೂಪಾಯಿ, ಎರಡು ಮೊಬೈಲ್ ಫೋನ್ (ಅಂದಾಜು ಮೌಲ್ಯ 1000/-ರೂ) ಹಾಗೂ 900/- ರೂಪಾಯಿ ನಗದು, ಚಾಲಕನ ಚಾಲನಾ ಪರವಾನಿಗೆ, 1,60,000/- ರೂ ಅಂದಾಜು ಮೌಲ್ಯದ ಅಟೋರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 2,96,900/- ರೂಪಾಯಿ ಆಗಬಹುದಾಗಿದೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ..

ಸೆ.15 ರಿಂದ ಸೆ. 19ರ ತನಕ ಇತಿಹಾಸ ಪ್ರಸಿದ್ಧ ಸುಳ್ಳಮಲೆ ಗುಹಾ ತೀರ್ಥ ಸ್ನಾನ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!