ತಾಲೂಕು ಸುದ್ದಿ

ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈಬಳಜ್ಜ ನೇತೃತ್ವದಲ್ಲಿ “ಪುತ್ತೂರುದ ಪಿಲಿಗೊಬ್ಬು-2023” ಮತ್ತು “ಫುಡ್ ಫೆಸ್ಟ್” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ.

Click below to Share News

ಪುತ್ತೂರು : ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ನಡೆಯಲಿರುವ “ಪುತ್ತೂರುದ ಪಿಲಿಗೊಬ್ಬು-2023” ಮತ್ತು ಫುಡ್ ಫೆಸ್ಟ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್ ಫೆಸ್ಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.

ಡಾ.ನರಸಿಂಹ ಕಾನಾವು ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಕಲೆ ಹುಲಿ ಕುಣಿತ ಕಾರ್ಯಕ್ರಮ ಎಲ್ಲರ ಮನ ಗೆಲ್ಲಲಿ ಎಂದರು.

ಕಾರ್ಯಕ್ರಮ ಸಂಘಟಕ ವಿಜಯ ಸಾಮ್ರಾಟ್ ನ ಸಹಜ್ ರೈ ಬೆಳಜ್ಜ ಮಾತನಾಡಿ, ದ.ಕ. ಜಿಲ್ಲೆಯ ಬಲಿಷ್ಠ ತಂಡಗಳ ಹುಲಿ ಕುಣಿತ ಕಾರ್ಯಕ್ರಮ ವಿನೂತನವಾಗಿ ಮೂಡಿಬರಲಿದೆ. ಈ ಹಿಂದೆ ವಿಜಯ ಸಾಮ್ರಾಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದೇವೆ. ಈ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ “ಫುಡ್ ಫೆಸ್ಟ್’ ಎಂಬ ಅ.21 ರಂದು ಸಂಜೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದ ಅವರು, ಎಲ್ಲರ ಸಹಕಾರ ಕೋರಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡ, ಜಾನಪದ, ದೈವೀಕಲೆಯಾಗಿರುವ ಹುಲಿಕುಣಿತ ವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಆಯೋಜಸಿರುವ ಪಿಲಿಗೊಬ್ಬು ಕಾರ್ಯಕ್ರಮ ಶ್ಲಾಘನಿಯ ಎಂದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!