ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದಗೌಡ !!
ಬಿಜೆಪಿಯ ಪ್ರಬಲ ನಾಯಕ, ಹಾಲಿ ಸಂಸದ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿರುವಂತ ಡಿವಿ ಸದಾನಂದ ಗೌಡ ಅವರು ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಹೌದು, ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು ರಾಜಕೀಯ ಜೀವನದಲ್ಲಿ ಸಣ್ಣ ನಿರ್ಧಾರವನ್ನು ಮಾಡುತ್ತಿದ್ದು ಚುನಾವಣಾ ರಾಜಕೀಯದಿಂದ ನಾನು ನಿವೃತ್ತಿಯನ್ನು ಪಡೆಯುತ್ತಿದ್ದೇನೆ. ಇನ್ನು ಮುಂದೆ ಯಾವುದೇ ರೀತಿಯ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ, ಸ್ಪರ್ಧಿಸುವದಿಲ್ಲ ಎಂಬುದಾಗಿ ಸ್ವತಃ ಅವರೇ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.
ಬಳಿಕ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಪಕ್ಷದ ಮೇರು ನಾಯಕ ಯಡಿಯೂರಪ್ಪನವರನ್ನು ಬಿಟ್ಟರೆ ಹೆಚ್ಚು ಸ್ಥಾನಮಾನಗಳನ್ನು ಪಡೆದು, ಅನುಭವಿಸದವ ಎಂದರೆ ಅದು ನಾನೇ. ಸುಮಾರು 30 ವರ್ಷಗಳ ಸುದೀರ್ಘ ರಾಜಕೀಯ ಜೀವನದದಲ್ಲಿ ಪಕ್ಷ ಎಲ್ಲವನ್ನೂ ನನಗೆ ಕೊಟ್ಟಿದೆ. 10 ವರ್ಷ ಎಂಎಲ್‍ಎ, 20 ವರ್ಷ ಎಂಪಿ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, 5 ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ 7 ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿ ಆಗಿದ್ದೇನೆ. ಇದಕ್ಕೆ ನಾನು ಚಿರರುಣಿ ಎಂದರು.
One Comment