ಪುತ್ತೂರು: ಅ.07ರಂದು ಕಿಲ್ಲೆ ಮೈದಾನದಲ್ಲಿ ‘ಶೌರ್ಯ ಜಾಗರಣ ರಥ ಯಾತ್ರೆ’ ಹಾಗೂ ‘ಬೃಹತ್ ಹಿಂದೂ ಶೌರ್ಯ ಸಂಗಮ’ ಕಾರ್ಯಕ್ರಮ.
ಪುತ್ತೂರು: ವಿಶ್ವಹಿಂದೂ ಪರಿಷದ್ – ಬಜರಂಗದಳ ಪುತ್ತೂರು ಇದರ ಆಶ್ರಯದಲ್ಲಿ ‘ಶೌರ್ಯ ಜಾಗರಣ ರಥ ಯಾತ್ರೆ’ ಹಾಗೂ ‘ಬೃಹತ್ ಹಿಂದೂ ಶೌರ್ಯ ಸಂಗಮ’ ಕಾರ್ಯಕ್ರಮ ಅ.07ರಂದು ಸಂಜೆ 5.30ಕ್ಕೆ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.
ವಿಶ್ವಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾದ ಯು. ಪೂವಪ್ಪ ಇವರ ಅಧ್ಯಕ್ಷತೆಯಲ್ಲಿ ‘ಬೃಹತ್ ಹಿಂದೂ ಶೌರ್ಯ ಸಂಗಮ’ ಕಾರ್ಯಕ್ರಮ ನಡೆಯಲಿದೆ, ದಿಕ್ಕೂಚಿ ಭಾಷಣವನ್ನು ಸು. ರಾಮಣ್ಣ
ದ್ವೇಷ ಪ್ರಚಾರಕ, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ನೀಡಲಿದ್ದಾರೆ, ಬಜರಂಗದಳ, ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕರಾದ ಮುರಳಿ ಕೃಷ್ಣ ಭಟ್ ಹಸಂತಡ್ಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೃಹತ್ ಶೋಭಾಯಾತ್ರೆ
ಅ.7ರಂದು ಸಂಜೆ ಗ.4.30ಕ್ಕೆ ಸರಿಯಾಗಿ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಶೌರ್ಯ ಜಾಗರಣ ರಥದೊಂದಿಗೆ ಬೃಹತ್ ಶೋಭಾಯಾತ್ರೆಯು ಮುಖ್ಯರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶೌರ್ಯ ಜಾಗರಣ ರಥ ಯಾತ್ರೆಯ ಸೆ.25 ರಂದು ಚಿತ್ರದುರ್ಗದಿಂದ ಆರಂಭಗೊಂಡು ಅ.10 ರವರೆಗೆ ಕರ್ನಾಟಕದ ಹಲವು ಭಾಗಗಳಲ್ಲಿ ‘ಶೌರ್ಯ ಜಾಗರಣ ರಥ ಯಾತ’ವನ್ನು ನಡೆಸಲಿದೆ. ಯಾತ್ರೆಯು ಸಂಚರಿಸಿ ಉಡುಪಿಯಲ್ಲಿ ಕೊನೆಗೊಳ್ಳಲಿದೆ.
One Comment