ತಾಲೂಕು ಸುದ್ದಿ
ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಮತ್ತು ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇದರ ನೇತೃತ್ವದಲ್ಲಿ ಜುಲೈ 30ರಂದು ಕೆಸರುಗದ್ದೆ ಕ್ರೀಡಾಕೂಟ
ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು, ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇವರ ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ ಭಜನಾ ತಂಡ ಹಾಗೂ ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಂದಿಗೆ “ಕಂಬುಳೊದ ಕಂಡೊಡ್ ಆಟಿದ ಐಸಿರ”, ಎಂಬ ಶೀರ್ಷಿಕೆಯಲ್ಲಿ ಜುಲೈ 30ರಂದು ಅರ್ಯಾಪು ಗ್ರಾಮದ ಮೇಲ್ಮಜಲು, ಹಳೆಮನೆ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ.
ಕರಾವಳಿ ಭಾಗದ ಮರಾಟಿ ಬಾಂಧವರಿಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ, ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ, ಮರಾಟಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ತಿಳಿಸಿದ್ದಾರೆ.