ತಾಲೂಕು ಸುದ್ದಿ
-
ಪುತ್ತೂರು: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕೆಯ್ಯುರು ನಿವಾಸಿ ಸಚಿನ್
ಪುತ್ತೂರು : ಕೆಯ್ಯುರು ಉದ್ಯೋಳೆ ನಿವಾಸಿ ಸಚಿನ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಚಿನ್ ಫಿಲೋಮಿನಾ ಕಾಲೇಜಿನಲ್ಲಿ ಬಿಸಿಎ ವಿದ್ಯಾಭ್ಯಾಸ ಮುಗಿಸಿದ್ದು, ಕೆಲಸದ ಹುಡುಕಾಟದಲ್ಲಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಸಹೋದರ, ಅಕ್ಕ, ಭಾವ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ
Read More » -
ಪುತ್ತೂರು ಸರಕಾರಿ ಕಾಲೇಜಿನ ಮುಸ್ಲಿಂ ಯುವತಿಗೆ ಚೂರಿ ಇರಿದ ಯುವಕ :ಆಸ್ಪತ್ರೆಗೆ ದಾಖಲು
ಪುತ್ತೂರು : ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ಯುವಕ ಚೂರಿಯಿಂದ ಇರಿದ ಘಟನೆ ಆ 20 ರಂದು ನಡೆದಿದೆ. ಬನ್ನೂರು ಮೂಲದ ಪುತ್ತೂರು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗೆ,ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದಿದ್ದು, ಗಾಯಗೊಂಡ ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ…
Read More » -
ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭ.
ಸುಬ್ರಹ್ಮಣ್ಯ: ಮಂಗಳೂರು -ಬೆಂಗಳೂರು ರೈಲು ಮಾರ್ಗದ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಳ್ಳುಪೇಟೆ ನಡುವೆ ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಮತ್ತೆ ಪ್ರಾರಂಭಿಸಲಾಗಿದೆ.
Read More » -
ಸೀನಿಯರ್ ವೈಟ್ ಲಿಫ್ಟಿಂಗ್ ನಲ್ಲಿ ಪುತ್ತೂರಿನ ರಜತ್ ರೈಗೆ ಚಿನ್ನದ ಪದಕ.
ಮೈಸೂರಿನಲ್ಲಿ ನಡೆದ ಸೀನಿಯರ್ ವೆಯಿಟ್ಲಿಫ್ಟಿಂಗ್ ನಲ್ಲಿ 81ಕೆಜಿ ವಿಭಾಗದಲ್ಲಿ ರಜತ್ ರೈ ಇವರು ಚಿನ್ನದ ಪದಕ ಪಡೆದಿದ್ದಾರೆ ಮತ್ತು ಒಟ್ಟು 298ಕೆಜಿ ಭಾರ ಎತ್ತುವ ಮೂಲಕ ಹೊಸ ರಾಜ್ಯ ಕೂಟ ದಾಖಲೆಯನ್ನು ಮಾಡಿರುತ್ತಾರೆ.
Read More » -
ಸುದ್ದಿ ಬಿಡುಗಡೆ ವ್ಯವಸ್ಥಾಪಕ ಚಂದ್ರಶೇಖರ್ ಉಮಿಗದ್ದೆ ನಿಧನ.
ಪುತ್ತೂರು:ಪುತ್ತೂರು ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕರಾಗಿದ್ದ ಚಂದ್ರಶೇಖರ್ ಗೌಡ ಉಮಿಗದ್ದೆ (58ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಆ.6ರಂದು ರಾತ್ರಿ ಸ್ವಗೃಹ ಆರ್ಯಾಪು ಗ್ರಾಮದ ಮರಿಕೆಯಲ್ಲಿ ನಿಧನರಾದರು. ಕಳೆದ ಸುಮಾರು 34 ವರ್ಷಗಳಿಂದ ಇವರು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ಓರ್ವ ಪ್ರಾಮಾಣಿಕ ನೌಕರನಾಗಿ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲವು ದಿನಗಳಿಂದ…
Read More » -
ಪುತ್ತೂರು : ತೆಂಕಿಲ ರಾಷ್ಟ್ರೀಯ ಹೆದ್ದಾರಿಗೆ(national highway) ಗುಡ್ಡ ಕುಸಿತ: ಹೆದ್ದಾರಿ ಬಂದ್.
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ(national highway ಬೈಪಾಸ್ ತೆಂಕಿಲದಲ್ಲಿ ಆ.2 ರಂದು ನಸುಕಿನ ಜಾವ ಗುಡ್ಡ ಕುಸಿದೆ. ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು…
Read More » -
ಮುಂದುವರಿದ ವರುಣಾರ್ಭಟ ; ದ.ಕ., ಉಡುಪಿ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್1) ಶಾಲಾ, ಕಾಲೇಜಿಗೆ ರಜೆ ಘೋಷಣೆ.
ಕರಾವಳಿ ಜಿಲ್ಲೆಯಾದ್ಯಂತ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ (ಆಗಸ್ಟ್.1) ದ.ಕ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.
Read More » -
ಭಾರೀ ಮಳೆ ಹಿನ್ನಲೆ ಜು.30ಮಂಗಳವಾರ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ.
ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಹಿನ್ನಲೆಯಲ್ಲಿ ಜು. 30ಮಂಗಳವಾರ ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲ ಶಾಲೆಗಳಿಗೆ ರಜೆ ನೀಡಿ ಬೆಳ್ತಂಗಡಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಈ ಹಿನ್ನಲೆಯಲ್ಲಿ ರಜೆ ನೀಡಲಾಗಿದೆ
Read More » -
ಬೆಳಿಯೂರುಕಟ್ಟೆ : ಕಾಲು ಜಾರಿ ನೀರಿಗೆ ಬಿದ್ದು ಜಗನ್ನೋಹನ್ ರೈ ಅಗರ್ತಬೈಲು ಮೃತ್ಯು.
ಬಲ್ನಾಡು : ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಳೇರಿಕಟ್ಟೆ ಎಂಬಲ್ಲಿ ನಡೆದಿದೆ. ಬುಳೇರಿಕಟ್ಟೆ ನಿವಾಸಿ ಜಗನ್ನೋಹನ್ ರೈ ಅಗರ್ತಬೈಲು (58) ಮೃತ ವ್ಯಕ್ತಿ. ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯ ಯುವಕರು ಸೇರಿ ಮೃತದೇಹವನ್ನು ಮೇಲಕ್ಕೆತ್ತಿದ್ದು, ಜಗನ್ನೋಹನ್ ರೈ ಅವರು ನೀರಿಗೆ ಬಿದ್ದು ಸಾವನ್ನಪ್ಪಿರುವ…
Read More » -
ಭಾರೀ ಮಳೆಯ ಹಿನ್ನಲೆ ದ.ಕ ಜಿಲ್ಲೆಯ 5 ತಾಲೂಕುಗಳ ಶಾಲಾ, ಕಾಲೇಜಿಗೆ ಜು.18 (ನಾಳೆ) ರಜೆ ಘೋಷಣೆ.
ದಕ್ಷಿಣ ಕನ್ನಡ : ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಎಡಬಿಡದೇ ಸುರಿಯುತ್ತಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ (ಜು.18) ದಕ್ಷಿಣಕನ್ನ
Read More »