ದೇಶ

ಖ್ಯಾತ ಕುಸ್ತಿ ಪಟು ವಿನೇಶ್ ಪೋಗಟ್ ಹರಿಯಾಣಾ ಚುನಾವಣೆಯಲ್ಲಿ ಗೆಲುವು

ಹರಿಯಾಣಾ : ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾಗಿದ್ದ ಖ್ಯಾತ ಕುಸ್ತಿ ಪಟು ವಿನೇಶ್ ಪೋಗಟ್ ಹರಿಯಾಣಾ ಚುನಾವಣೆಯಲ್ಲಿ ಗೆಲುವಿನ ಕೇಕೆ ಹಾಕಿದ್ದಾರೆ. ಬೆಳಗಿನಿಂದಲೂ ಹಾವು ಏಣಿ ಆಟವಾಡುತ್ತಿದ್ದ ಅದೃಷ್ಟ ಲಕ್ಷ್ಮಿ ಕೊನೆಗೂ ವಿನೇಶ್ ಫೋಗಟ್ ಪರವಾಗಿ ಒಲಿದಿದ್ದು, ವಿನೇಶ್ ಗೆಲುವಿನ ನಗೆ ಬೀರಿದ್ದಾರೆ.

ಬೆಳಗಿನ ಆರಂಭಿಕ ಟ್ರೆಂಡ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಕೂಡಲೇ ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲೇಬಿ ಹಂಚಲು ಪ್ರಾರಂಭಿಸಿದ್ದರೆ, ಹರಿಯಾಣಾ ಕಾಂಗ್ರೆಸ್ ಮುಖಂಡರು ಪಟಾಕಿ ಹೊಡೆಯುತ್ತಾ ವಿಜಯೋತ್ಸವದ ಮೆರವಣಿಗೆ ಪ್ರಾರಂಭಿಸಿದ್ದರು. ಆದರೆ ಈ ಉತ್ಸಾಹ ತುಂಬಾ ಹೊತ್ತು ಉಳಿಯಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಇಡೀ ಟ್ರೆಂಡ್‌ ಬದಲಾಗಿದ್ದಷ್ಟೇ ಅಲ್ಲದೇ ಬಿಜೆಪಿ ಹಾಟ್ರಿಕ್‌ ವಿಜಯ ಸಾಧಿಸಿ ಸರ್ಕಾರ ರಚಿಸುವತ್ತ ಸಾಗಿದೆ.
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಹರಿಯಾಣಾದಲ್ಲಿ ರಾಜಕೀಯ ಪಕ್ಷವೊಂದು ಸತತ ಮೂರನೇ ಬಾರಿಗೆ ಗೆಲುವು ಸಾಧಿಸುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!