ದೇಶ

ಕೋಲ್ಕತ್ತಾ ತಂಡದ ಮಡಿಲು ಸೇರಿದ ಐಪಿಎಲ್ 2024(IPL2024) ಟ್ರೋಫಿ.

Click below to Share News

ಐಪಿಎಲ್ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಸೀಸನ್‌ನ ಅಂತಿಮ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH vs KKR) ನಡುವೆ ನಡೆಯಿತು.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ಭರ್ಜರಿಯಾಗಿ ಗೆಲ್ಲುವ ಮೂಲಕ 3ನೇ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ.ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದಾದ ಬಳಿಕ ಎಸ್‌ಆರ್‌ಎಚ್ ತಂಡ 18.3 ಓವರ್‌ಗೆ 10 ವಿಕೆಟ್ 10 ವಿಕೆಟ್ ನಷ್ಟಕ್ಕೆ 113 ರನ್‌ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು 10.3 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 114 ರನ್‌ ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌ಗಳ ಗೆಲುವು ದಾಖಲಿಸಿತು.

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಹೈದರಾಬಾದ್:
ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕಳಪೆ ಆರಂಭ ಪಡೆದ ತಂಡ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಪತನಗೊಂಡಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. ಹೈದರಾಬಾದ್ ಪರ ಅಭಿಷೇಕ್‌ ಶರ್ಮಾ 2 ರನ್, ಟ್ರಾವಿಸ್ ಹೆಡ್ ಶೂನ್ಯ, ರಾಹುಲ್‌ ತ್ರಿಪಾಠಿ 9 ರನ್, ಅಡೇನ್‌ ಮಾರ್ಕರಮ್‌ 20 ರನ್, ನಿತೀಶ್‌ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್‌ 16 ರನ್, ಶಾಬಾಝ್‌ ಅಹ್ಮದ್‌ 8 ರನ್, ಅಬ್ದುಲ್‌ ಸಮೀದ್‌ 4 ರನ್, ನಾಯಕ ಪ್ಯಾಟ್ ಕಮಿನ್ಸ್‌ 24 ರನ್ ಗಳಿಸುವ ಮೂಲಕ ಹೈದರಾಬಾದ್ ಅಲ್ಪಮೊತ್ತಕ್ಕೆ ಕುಸಿಯಿತು.

ಕೆಕೆಆರ್ ಭರ್ಜರಿ ಬೌಲಿಂಗ್‌:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್‌ ಮಾಡಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಆರಂಭದಿಂದಲೇ ಹೈದರಾಬಾದ್‌ ಮೇಲೆ ಸವಾರಿ ಮಾಡಿತು. ಕೋಲ್ಕತ್ತಾ ಆರಂಭದಲ್ಲಿಯೇ SRH ತಂಡದ ಬ್ಯಾಟಿಂಗ್‌ ಬೆನ್ನೆಲುಭಾಗಿದ್ದ ಹೆಡ್‌ ಮತ್ತು ಅಭಿಷೇಕ್‌ ಇಬ್ಬರ ವಿಕೆಟ್ ಪಡೆದು ಬ್ರೇಕ್‌ ಥ್ರೂ ನೀಡಿತು. ಕೆಕೆಆರ್ ಪರ ಮಿಚೆಲ್‌ ಸ್ಟಾರ್ಕ್‌ 3 ಓವರ್‌ಗೆ 14 ರನ್‌ ನೀಡಿ 2 ವಿಕೆಟ್ ಪಡೆದರೆ, ಆಯಂಡ್ರೂ ರೆಸೆಲ್‌ 2.3 ಓವರ್‌ಗೆ 19 ರನ್‌ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ವೈಭವ್‌ ಅರೋರಾ 3 ಓವರ್‌ಗೆ 24 ರನ್ಗೆ 1 ವಿಕೆಟ್, ಹರ್ಷಿತ್‌ ರಾಣಾ 2 ವಿಕೆಟ್, ಸುನೀಲ್‌ ನರೇನ್‌ 1 ವಿಕೆಟ್ ಹಾಗೂ ವರೂಣ್‌ ಚರ್ಕವರ್ತಿ 1 ವಿಕೆಟ್ ಪಡೆದು ಮಿಂಚಿದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!