ತಾಲೂಕು ಸುದ್ದಿ

ಬಲ್ನಾಡು : ಬಲ್ನಾಡು ಗ್ರಾಮ ಪಂಚಾಯತ್ ನಲ್ಲಿ ಅದ್ದೂರಿ ಸೀಮಂತದ ಸಂಭ್ರಮ..!!

Click below to Share News

ಬಲ್ನಾಡು : ಬಲ್ನಾಡು ಗ್ರಾಮ ಪಂಚಾಯತ್ ಸಿಬ್ಬಂದಿ ಶಶಿಕಲಾ ಅವರಿಗೆ ಪಂಚಾಯತ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಸೀಮಂತ ಕಾರ್ಯಕ್ರಮ ಅ.7ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸದಾ ಕೆಲಸದ ಒತ್ತಡದಲ್ಲಿ ಇರುವ ಪಂಚಾಯತ್ ಸಿಬ್ಬಂದಿಗಳು, ತನ್ನ ಸಹೋದ್ಯೋಗಿಗೆ ಪಂಚಾಯತ್ ನಲ್ಲಿ ಅದ್ದೂರಿ ಸೀಮಂತ ಕಾರ್ಯ ಮಾಡಿದ ವಿಶೇಷ ಘಟನೆಗೆ ಬಲ್ನಾಡು ಗ್ರಾಮ ಪಂಚಾಯತ್ ಸಾಕ್ಷಿಯಾಗಿದೆ.

ಪಂಚಾಯತ್ ಸಿಬ್ಬಂದಿ ಶಶಿಕಲಾ ಅವರ ಸೀಮಂತ ಕಾರ್ಯ ನಡೆಸಿದ್ದು, ಹಲವು ಬಗೆಯ ಸಿಹಿತಿಂಡಿ ಸಹಿತ ಸೀಮಂತ ಉಡುಗೊರೆಯನ್ನು ಪಂಚಾಯತ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಶಶಿಕಲಾ ಅವರಿಗೆ ನೀಡಿ ಶುಭ ಹಾರೈಸಿದರು, ಬಳಿಕ ಮಧ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಭಟ್ ಬಬ್ಬಿಲಿ, ಉಪಾಧ್ಯಕ್ಷರಾದ ರವಿಚಂದ್ರ ಸಾಜ, ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಗ್ರಾ. ಪ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಹಿತ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಂದೆ ಓದಿ : ಪುತ್ತೂರು : ಅ.22ರಂದು ವಿಜಯ ಸಾಮ್ರಾಟ್ ಪುತ್ತೂರುಇದರ ಸಾರಥ್ಯದಲ್ಲಿ ಪುತ್ತೂರುದ ಪಿಲಿಗೊಬ್ಬು- 2023 ಕಾರ್ಯಕ್ರಮ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!