ತಾಲೂಕು ಸುದ್ದಿ

ಬಂಟ್ವಾಳ :ಆ್ಯಕ್ಟಿವಾಗೆ ಹಿಟ್ ಆ್ಯಂಡ್ ರನ್:  ಪುತ್ತೂರಿನ ನೆಹರುನಗರ ನಿವಾಸಿ ಚಿದಾನಂದ ಕಾಮತ್ ಸ್ಥಳದಲ್ಲೇ ಮೃತ್ಯು.

Click below to Share News

ಬಂಟ್ವಾಳ: ಕಾರೊಂದು ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.


ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಅವಿವಾಹಿತ. ತನ್ನ ತಾಯಿ ಜೊತೆ ವಾಸವಾಗಿದ್ದಾರೆ. ಮೃತರು ತಾಯಿ,
ವಿವೇಕಾನಂದ ಕಾಲೇಜು ಉಪನ್ಯಾಸಕ ರಮಾನಂದ ಕಾಮತ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಕಟ್ಟಡದಲ್ಲಿರುವ ಕಾಮತ್ಸ್ ಸ್ವೀಟ್ಸ್ ಮಾಲಕ ಮಂಜುನಾಥ್ ಕಾಮತ್ ಸಹಿತ ಐವರು ಸಹೋದರರನ್ನು ಅಗಲಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!