ತಾಲೂಕು ಸುದ್ದಿ

ದೊಡ್ಡಡ್ಕ, ಫೆ.23: ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Click below to Share News

ದೊಡ್ಡಡ್ಕ : ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ನಡೆಯುವ 31 ನೇ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.23ರಂದು ನಡೆಯಿತು.

ಎ.5 ರಂದು  ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು,ಬೆಳಿಗ್ಗೆ ಗಣಪತಿ ಹವನ, ಮಹಾಲಕ್ಷ್ಮೀ ಪೂಜೆ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ ಸಭಾಕಾರ್ಯಕ್ರಮ ನಡೆದ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ “ಸಂಪೂರ್ಣ ನಳದಮಯಂತಿ ” ನಡೆಯಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕಜಂಗಮುಗೇರು. ಅರ್ಚಕರು ವೆಂಕಟಕೃಷ್ಣ ಭಟ್, ಪಾಲೇಚ್ಚಾರು, ಗಣಪತಿ ನಾಯಕ್, ಸೇಸಪ್ಪ ನಾಯ್ಕದೊಡ್ಡಡ್ಕ, ಚೆನ್ನಕೇಶವ ಆಚಾರ್ಯ, ಪೂವಪ್ಪ ನಾಯ್ಕ ದೊಡ್ಡಡ್ಕ,ಯೋಗೀಶ್ ಬಲ್ಯಾಯ, ಸತೀಶ್ ಗೌಡ ಆಗರ್ತಬೈಲ್,ಪ್ರಶಾಂತ್ ಬಲ್ಯಾಯ, ಮತ್ತಿತರರು ಉಪಸ್ಥಿತರಿದ್ದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!