ತಾಲೂಕು ಸುದ್ದಿ

ಪುತ್ತೂರು : ಅ.22 ರಂದು ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ” ಪುತ್ತೂರುದ ಪಿಲಿಗೊಬ್ಬು-2023″

Click below to Share News

ಪುತ್ತೂರು : ಯುವ ಸಂಘಟಕ ಸಹಜ್ ಜೆ. ರೈ ಬಳಜ್ಜ ಮುಂದಾಳತ್ವದಲ್ಲಿ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 22ರಂದು ‘ಪುತ್ತೂರ್‌ದ ಪಿಲಿಗೊಬ್ಬು- 2023’ ಹೆಸರಿನ ಬೃಹತ್ ಹುಲಿ ವೇಷ ಸ್ಪರ್ಧೆ
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಸರಾಂತ 10 ಹುಲಿವೇಷ ತಂಡಗಳು ಭಾಗವಹಿಸಲಿವೆ ಎಂದು ಸಂಘಟಕರು ತಿಳಿಸಿದ್ದಾರೆ, ಹುಲಿವೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಕ್ಕೆ 23 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಪ್ರತಿ ತಂಡದಲ್ಲಿ ಗರಿಷ್ಠ 15 ಸದಸ್ಯರಿರಬಹುದಾಗಿದೆ.

ಬಹುಮಾನ
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಮೂರು ಲಕ್ಷ (ಪ್ರಥಮ), ಎರಡು ಲಕ್ಷ (ದ್ವಿತೀಯ) ಹಾಗೂ ಒಂದು ಲಕ್ಷ (ತೃತೀಯ) ಬಹುಮಾನ ನಿಗದಿಪಡಿಸಲಾಗಿದೆ. ತಲಾ ಹತ್ತು ಸಾವಿರ ರೂಗಳ 5 ವೈಯಕ್ತಿಕ ಬಹುಮಾನ ವನ್ನು ನಿಗದಿಪಡಿಸಲಾಗಿದೆ. ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನ ಕಲಾವಿದರ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ‘ಫುಡ್ ಫೆಸ್ಟ್‌’.

“ಪುತ್ತೂರ್‌ದ ಪಿಲಿಗೊಬ್ಬು’ ಕಾರ್ಯಕ್ರಮದ ಜೊತೆಗೆ ಅಕ್ಟೋಬರ್ 21 ರಿಂದ ಎರಡು ದಿನಗಳ ಕಾಲ ವೈವಿಧ್ಯಮಯ ಆಹಾರ ಶೈಲಿಯ ಸಸ್ಯಾಹಾರಿ ‘ಫುಡ್ ಫೆಸ್ಟ್’ ಏರ್ಪಡಿಸಲಾಗಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ‘ಫುಡ್ ಫೆಸ್ಟ್‌’ನಲ್ಲಿ ಶುಚಿ ರುಚಿಯಾದ ಅತ್ಯುತ್ತಮ ಆಹಾರ ಪದಾರ್ಥಗಳಿರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷ ಸಹಜ್‌ ರೈ ಮುಂದಾಳತ್ವದಲ್ಲಿ ಸಮಿತಿಯ ಪದಾಧಿಕಾರಿಗಳಾದ ಪುತ್ತೂರು ಉಮೇಶ್ ನಾಯಕ್, ಸುಜಿತ್ ರೈ ಪಾಲ್ತಾಡು, ನಾಗರಾಜ ನಡುವಡ್ಕ, ಶರತ್ ಆಳ್ವ ಕೂರೇಲು, ಸಂದೀಪ್ ರೈ ನಂಜೆ, ದೇವಿ ಪ್ರಕಾಶ್ ಭಂಡಾರಿ, ಸುರೇಶ್ ಪಿಡಪಟ್ಲ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್ ಈಶಾನ್ಯ, ಅಶೋಕ್ ಅಡೂರು, ರಾಜೇಶ್ ಕೆ. ಗೌಡ, ಉದಯ್ ಪಾಟಾಳಿ ಬೆಳ್ಳಾರೆ, ಅರುಣ್ ರೈ ಮತ್ತು ವಿಜಯ ಸಾಮ್ರಾಟ್ ಇದರ ಸದಸ್ಯರ ತಂಡ ಕಾರ್ಯಕ್ರಮದ ಯಶಸ್ಸಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ನಾಡಹಬ್ಬವಾದ ದಸರಾ ಮತ್ತು ಅದರ ಜೊತೆಜೊತೆಗೆ ಕಾಣಿಸಿಕೊಳ್ಳುವ ಹುಲಿವೇಷ ತಂಡಗಳ ಸಂಭ್ರಮವನ್ನು ಪುತ್ತೂರಿನ ಜನತೆಯ ಕಣ್ಣುಂಬಿ ಕೊಳ್ಳುವಂತಾಗಲು ಸರ್ವಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಸಹಜ್ ರೈ ತಿಳಿಸಿದ್ದಾರೆ .


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!