ತಾಲೂಕು ಸುದ್ದಿ

ಪುತ್ತೂರು(Puttur) : ಮೇ 25ರಂದು ಪುತ್ತೂರಿನಲ್ಲಿ "ಅಲ್ಟಿಮೇಟ್ ಟ್ರೋಫಿ ಸೀಸನ್ 2" ಖೋ-ಖೋ ಪಂದ್ಯಾಟ.

Click below to Share News

ಪುತ್ತೂರು : ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಖೋ-ಖೋ ಸಂಸ್ಥೆ ಅಲ್ಟಿಮೇಟ್ಸ್ ಸ್ಪೋರ್ಟ್ಸ್  ಕ್ಲಬ್ ಪುತ್ತೂರು(Puttur) ಮತ್ತು ವಿವೇಕಾನಂದ ಕಾಲೇಜು ಸ್ವಯತ ಇದರ ಜಂಟಿ ಆಶ್ರಯ ದೊಂದಿಗೆ 8 ತಂಡಗಳ ಲೀಗ್ ಕಮ್ ನಾಕ್ಔಟ್ ಮಾದರಿಯ ಖೋ-ಖೋ ಪಂದ್ಯಾಟಗಳು  ಮೇ 25ರಂದು ಬೆಳಿಗ್ಗೆ 8ಕ್ಕೆ ನೆಹರೂ ನಗರ ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುಮಾರು ಜಿಲ್ಲೆಯ 96 ಕ್ರೀಡಾಪಟುಗಳು ಈ ಒಂದು ಕೂಟದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಎಂಟು ತಂಡದ ಪ್ರತಿಷ್ಠಿತ ಮಾಲಕರು, 30ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅತ್ಯದ್ಭುತ ಆಟಗಾರರು,ಆಳ್ವಾಸಿನ ಅನುಭವಿ ರಾಷ್ಟ್ರೀಯ ಕ್ರೀಡಾಪಟುಗಳು,ರಾಷ್ಟ್ರೀಯ ತರಬೇತುದಾರರು, ರಾಷ್ಟ್ರೀಯ ತೀರ್ಪುಗಾರರು ತೀರ್ಪುಗಾರರ ಮಂಡಳಿಯು ಈ ಪಂದ್ಯಕೂಟದಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭ ಸಮಾರೋಪ.
ಸಂಜೆ ಗಂಟೆ 5ಕ್ಕೆ ಸಮಾರಂಭ ಸಮಾರೋಪ ನಡೆಯಲಿದ್ದು ಹತ್ತಾರು ಅತಿಥಿ ಗಣ್ಯರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಆಟಗಾರತಿ, ರಾಷ್ಟ್ರಮಟ್ಟದ ಆಟಗಾರರಿಗೆ, ರಾಜ್ಯ ಮಟ್ಟದ ಆಟಗಾರರಿಗೆ, ರಾಷ್ಟ್ರಮಟ್ಟದ ತರಬೇತುಗಾರರಿಗೆ, ಈ ಒಂದು ಪಂದ್ಯಕೂಟದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!