ತಾಲೂಕು ಸುದ್ದಿ

ಪುತ್ತೂರು : ಮೇ 25ರಂದು ವಿವೇಕಾನಂದ(Vivekananda College) ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ "ಅಲ್ಟಿಮೇಟ್ ಟ್ರೋಪಿ ಸೀಸನ್ 2" ಖೋ-ಖೋ ಪಂದ್ಯಾಟ.

Click below to Share News

ಪುತ್ತೂರು :ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆ, ಜಿಲ್ಲಾ ಖೋ -ಖೋ ಸಂಸ್ಥೆ ಮತ್ತು ಅಲ್ಟಿಮೇಟ್ಸ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಹಾಗೂ ವಿವೇಕಾನಂದ ಕಾಲೇಜು(Vivekananda College)ಇದರ ಜಂಟಿ ಆಶ್ರಯದಲ್ಲಿ 8 ತಂಡಗಳ ಲೀಗ್ ಮಾದರಿಯ ಖೋ-ಖೋ ಪಂದ್ಯಾಟ ಮೇ 25ರಂದು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಬೆಳಗ್ಗೆ 9 ಗಂಟೆಗೆ ಸರಿಯಾಗಿ ನಿವೃತ ಎಸ್ ಬಿ ಐ ಬ್ಯಾಂಕ್ ಉದ್ಯೋಗಿ, ಜಿ.ಕೆ ಪೂವಪ್ಪ ಅವರಿಂದ ಉದ್ಘಾಟನೆಗೊಂಡು, ಕುಮಾರಿ ದೀಪ್ತಿ ಇವರ ನಿರೂಪಣೆಯಿಂದ ಕಾರ್ಯಕ್ರಮ ಪ್ರಾರಂಭ ಗೊಂಡಿತು, ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ  ಕ್ಲಬ್ ನ ಸದಸ್ಯ ಕೀರ್ತನ್ ಇವರು ಸ್ವಾಗತಿಸಿ, ವಿನಯ್ ಅವರು ಪ್ರಾರ್ಥನೆಯ ಮೂಲಕ ನೆರೆದಿದ್ದ ಕ್ರೀಡಾಪಟುಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಭಕ್ತಿಯ ಭಾವ ಮೂಡಿಸಿದರು. ಉದ್ಘಾಟನಾ ನೆಲೆಯಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ವಿವೇಕಾನಂದ ಸ್ವಾಯತ್ತ ಕಾಲೇಜಿನ  ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ರವರು ಕ್ಲಬ್ ನ ಸದಸ್ಯರು ಖೋ-ಖೋ ಕ್ರೀಡೆಯನ್ನು ಬೆಳೆಸಲು  ಪಡುತ್ತಿರುವ ಶ್ರಮದ ಬಗ್ಗೆ ತಿಳಿಸಿದರು. ಹಾಗೆಯೇ ಕ್ಲಬ್ ನ ಕಾರ್ಯದರ್ಶಿಗಳಾದ ಕಾರ್ತಿಕ್ ಅವರು ನೆರೆದಿದ್ದವರಿಗೆ ಧನ್ಯವಾದವನ್ನು ತಿಳಿಸಿ, ಶ್ರೀ ಓಬಯ್ಯ ಪರವಾನ್ ದೈವನರ್ತಕರು  ಹಳೆನೇರಂಗಿಯವರು ಈ ಪಂದ್ಯಕೂಟದ ಎರಡು ಅಂಕಣವನ್ನು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು.
ಬಳಿಕ 8 ತಂಡಗಳ ಮಧ್ಯೆ ಪ್ರಾರಂಭವಾದ ರೋಚಕ ಪಂದ್ಯಾಟ ರೋಮಾಂಚನವಾಗಿತ್ತು. 8 ತಂಡಗಳಲ್ಲಿ 4 ತಂಡಗಳು ಉಪಾಂತ್ಯ ಪಂದ್ಯವನ್ನು ಪ್ರವೇಶಿಸಿತು. ಉಪಾಂತ್ಯ ಪಂದ್ಯಾಟ  ಮುಗಿದ ಬಳಿಕ,ಅಂಕಣದ ಮಧ್ಯೆ ಪ್ರೇಕ್ಷಕರ ಸಮೂಹದಲ್ಲಿ 2023-24ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಖೋ-ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿದ ಆಟಗಾರರಿಗೆ ಮತ್ತು ತರಬೇತುದಾರರಿಗೆ ಹಾಗೆ ಅಂತರಾಷ್ಟ್ರೀಯ ಖೋ-ಖೋ  ಆಟಗಾರ್ತಿ ದೀಕ್ಷಾ ಮತ್ತು ಇಂಡಿಯನ್ ಬುಕ್ ರೆಕಾರ್ಡ್ ಹೋಲ್ಡರ್ ಪವನ್, ಹಾಗು ಕ್ಲಬ್ಬಿನಲ್ಲಿ 23-24ನೇ ಸಾಲಿನಲ್ಲಿ ಸಾಧನೆಗೈದ 23 ಸದಸ್ಯರಿಗೆ ಅತಿಥಿ ಗಣ್ಯರಾದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠoದೂರು ಸೇರಿದಂತೆ ಹಲವಾರು ಗಣ್ಯರ ಮುಖೇಣ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ತದನಂತರದಲ್ಲಿ ವಿಸಿ ಕ್ಯಾಪಿಟಲ್ಸ್ ಮತ್ತು ಕಲ್ಲೇಗ ವಾರಿಯರ್ಸ್ ಈ ತಂಡಗಳ ಮಧ್ಯೆ ಪ್ರಾರಂಭವಾದ ರೋಮಾಂಚನಕರ ಫೈನಲ್ ಪಂದ್ಯಾಟ ಕೊನೆಯ ಕ್ಷಣದವರೆಗೂ ವಿಜಯಶಾಲಿಯನ್ನು ನಿರ್ಧರಿಸಲು ಸಾಧ್ಯವಾಗದ ರೀತಿಯಲ್ಲಿ ಜಿದ್ದಾಜಿದ್ದಿನ ಪಂದ್ಯವಾಗಿತ್ತು.

ಇನ್ನಷ್ಟು ಸುದ್ದಿಗಳಿಗೆ ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಒತ್ತಿ

8 ತಂಡಗಳ ರೋಚಕ ಪಂದ್ಯಕೂಟ

ಪಂದ್ಯಕೂಟದಲ್ಲಿ ಎಂಟನೇ ಸ್ಥಾನವನ್ನು ಸ್ಪಂದನ ಸ್ಪೋರ್ಟ್ಸ್ ಕ್ಲಬ್ ಮತ್ತು ಆರ್ಟ್ಸ್ ಪಡೆದುಕೊಂಡರೆ ಏಳನೇ ಸ್ಥಾನವನ್ನು ಸ್ಪೋರ್ಟ್ಸ್ ವರ್ಲ್ಡ್ ಕಿಂಗ್ಸ್ ಪುತ್ತೂರು, 6ನೇ ಸ್ಥಾನವನ್ನು ಪಟ್ಲಾ ಸ್ಪೋರ್ಟ್ಸ್ ಕ್ಲಬ್ ಕಲ್ಲೇಗ, ಐದನೇ ಸ್ಥಾನವನ್ನು ವಿಘ್ನೇಶ್ವರ ಕಲ್ಲಡ್ಕ ಪಡೆದುಕೊಂಡರೆ ಈ ಉಪಾಂತ್ಯ ಪಂದ್ಯದಲ್ಲಿ ರೋಮಾಂಚನಕಾರಿ ಪ್ರದರ್ಶನವನ್ನು ತೋರ್ಪಡಿಸಿ ಪುತ್ತೂರು ಅಟ್ಯಾಕರ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡರೆ ಮೂರನೇ ಸ್ಥಾನವನ್ನು ಬಿ ಎಚ್ ಬ್ರದರ್ ಪಡೆದುಕೊಂಡರು.ಫೈನಲ್ ಗೆ ಪ್ರವೇಶ ಪಡೆದ ತಂಡಗಳಲ್ಲಿ ಕಲ್ಲೇಗ ವಾರಿಯರ್ಸ್ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿ 30-34 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ ಪ್ರಥಮ ಸ್ಥಾನಕ್ಕಾಗಿ ಹೋರಾಡಿದ ವಿ ಸಿ ಕ್ಯಾಪಿಟಲ್ಸ್ ಈ ಪಂದ್ಯಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಗೆದ್ದ ತಂಡಗಳಿಗೆ ಬಹುಮಾನವನ್ನು ವಿತರಿಸಿ, ಜೊತೆಗೆ ಪಂದ್ಯಕೂಟದಲ್ಲಿ ವೈಯಕ್ತಿಕ ಬಹುಮಾನವಾಗಿ ಉತ್ತಮ ಸರ್ವಾಂಗೀನ ಆಟಗಾರನಾಗಿ ಕಲ್ಲೇಗ ವಾರಿಯರ್ಸ್ ನ ಅನುದೀಪ್,   ಅದೇ ರೀತಿ ಉತ್ತಮ ಹಿಡಿತಗಾರನಾಗಿ  ಬಿ ಎಚ್ ಬ್ರದರ್ಸ್ ನ ಶಶಾಂಕ್, ಉತ್ತಮ ಓಟಗಾರನಾಗಿ  ವಿ ಸಿ ಕೆಪಿಟಲ್ಸ್ ನ ಪ್ರಮೋದ್, ಉತ್ತಮ ಫೋಲ್ ಡೈ ಆಗಿ ವಿ ಸಿ ಕ್ಯಾಪಿಟಲ್ ನ ಭರತ್ , ಉತ್ತಮ ಡ್ರೀಮ್ ರನ್ನರ್  ಆಗಿ ಕಲ್ಲೇಗ ವಾರಿಯರ್ಸ್ ನ ರಮೇಶ, ಶಿಸ್ತು ಬದ್ಧ ಆಟಗಾರನಾಗಿ ವಿಘ್ನೇಶ್ವರ ಕಲ್ಲಡ್ಕ ದ ಸಾಹೇಬ್ ಗೌಡ ಪಡೆದುಕೊಂಡರೆ, ಪಂದ್ಯಕೂಟದ ಅತಿ ಕಿರಿಯ ಮತ್ತು ಉತ್ಸಾಹದಾಯಕ ಆಟಗಾರನಾಗಿ ಕಲ್ಲೇಗ ವಾರಿಯರ್ಸ್ ನ ವನೀಶ್ ಪಡೆದುಕೊಂಡರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!