ತಾಲೂಕು ಸುದ್ದಿ

ಸಾಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Click below to Share News

ಸಾಜ: ಬಲ್ನಾಡು ಗ್ರಾಮದ ಸಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಮೇ 31ರಂದು ನಡೆಯಿತು. ಶಾಲೆಯನ್ನು ಸ್ವಚ್ಚಮಾಡಿ ತಳಿರು ತೋರಣ ಬಣ್ಣದ ಕಾಗದದಿಂದ ಸಿಂಗರಿಸಲಾಗಿತ್ತು.

ಆ ಬಳಿಕ ಶ್ರೀ ಸುಧಾಕರ್ ನಾಯಕ್ ಅಧ್ಯಕ್ಷರು ಶಾಲಾಭಿವೃದ್ಧಿ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು, ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಪ್ರೇಮಿ ಶ್ರೀ ಚಂದಪ್ಪ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಅತೀ ಮುಖ್ಯ ಮತ್ತು ಮನೆಯಿಂದಲೇ ಸಂಸ್ಕಾರ ರೂಡಿಯಾಗ ಬೇಕು ಎಂದು ಮಕ್ಕಳಿಗೆ ಶುಭಹಾರೈಸಿದರು, ತದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು ಸಂದರ್ಭದಲ್ಲಿ ಶಿಕ್ಷಣ ವೇದಿಕೆಯಲ್ಲಿ ಬಲ್ನಾಡು ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀಮತಿ ಶೋಭಾ ಕೇಶವ, ವಸಂತಿ ಹರೀಶ್ ಪೂಜಾರಿ, ಶಿಕ್ಷಕರಾದ ಶಶಿಕಾಂತ್ ಉಪಸ್ಥಿತರಿದ್ದರು, ಶಿಕ್ಷಕಿ ಕವಿತಾ ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣ ಕೂಟೇಲು ಧನ್ಯವಾದ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ತಾನುರಾಗ ಬಳಗ ಮತ್ತು ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!