ತಾಲೂಕು ಸುದ್ದಿ

ವಿಟ್ಲ: ನೀರಿನ ಟ್ಯಾಂಕ್ ಗೆ ಹಾರಿ ಮಹಿಳೆ ಆತ್ಯಹತ್ಯೆ

Click below to Share News

ವಿಟ್ಲ: ಮಹಿಳೆಯೊಬ್ಬರು ಆತ್ಯಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ನೆಟ್ಟ ಮುನ್ನೂರು ಗ್ರಾಮದ ನೆಕ್ಕರೆ ಮಠ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶಾಂತಲಾ (41) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದು ಇದಕ್ಕೆ ಸ್ಥಳೀಯವಾಗಿ ಆಯುರ್ವೇದಿಕ್ ಚಿಕಿತ್ಸೆ ಮಾಡಿದರು ನೋವು ಕಡಿಮೆ ಯಾಗದಿರುವುದರಿಂದ ಜೀವನದಲ್ಲಿ ಜಿಗುಪ್ಪೆಗೊಂಡು ನೀರಿನ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಹೋದರ ನೀಡಿದ ದೂರಿನ ಅನ್ವಯ ತಿಳಿದು ಬಂದಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!