ತಾಲೂಕು ಸುದ್ದಿ
ಪುತ್ತೂರು : ಯುವತಿ ನಾಪತ್ತೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ದಾಖಲು.!!!
ಪುತ್ತೂರು : ಪುತ್ರಿ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಇರ್ದೆ ನಿವಾಸಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಇರ್ದೆ ಗ್ರಾಮದ ಸುಶೀಲಾ ಎಂಬವರ ಪುತ್ರಿ ಲಿಖಿತಾ (23) ನಾಪತ್ತೆಯಾದವರು.
ಸುಶೀಲಾ ರವರು ಕೂಲಿ ಕೆಲಸ ಮಾಡುತ್ತಿದ್ದು, ಆ.9 ರಂದು ಬೆಳಿಗ್ಗೆ ಕೂಲಿ ಕೆಲಸದ ನಿಮಿತ್ತ ತೆರಳಿದ್ದು, ಸಂಜೆ ಮನೆಗೆ ಹಿಂದಿರುಗುವಾಗ ಮನೆಯಲ್ಲಿದ್ದ ಪುತ್ರಿ ಲಿಖಿತಾ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.