ರಾಜ್ಯ
ಬೆಂಗಳೂರು ಲೂಲು ಮಾಲ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಅಶ್ವಥ್ ನಾರಾಯಣ ಪೊಲೀಸ್ ವಶಕ್ಕೆ..!
ಬೆಂಗಳೂರು : ನಗರದ ಮಾಲ್ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮಿ ವ್ಯಕ್ತಿಯ ಬಂಧನವಾಗಿದೆ. ಬಂಧಿತ ನಿವೃತ್ತ ಶಿಕ್ಷಕ ಎಂದು ತಿಳಿದು ಬಂದಿದೆ. ವ್ಯಕ್ತಿಯನ್ನು ಬಸವೇಶ್ವರ ನಗರದ ಅಶ್ವಥ್ ನಾರಾಯಣ್ ಎಂದು ಗುರುತಿಸಲಾಗಿದೆ.
ಆರೋಪಿ ಅಶ್ವಥ್ ನಾರಾಯಣ್ ವಾಸವಿದ್ದ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದನು.ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಮಾಲ್ ನಲ್ಲಿ ಲೈಂಗಿಕ ಕಿರುಕುಳ (Sexual harassment) ನೀಡಿರುವ ವಿಡಿಯೋ ವೈರಲ್ (Viral Video) ಆಗಿತ್ತು. ಯಶವಂತ್ ಎಂಬ ಯುವಕ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ರು.
ಅಕ್ಟೋಬರ್ 29ರ ಭಾನುವಾರ ಸಂಜೆ ಸುಮಾರು 6.30ರ ವೇಳೆಗೆ ಬೆಂಗಳೂರಿನ ಲೂಲು ಮಾಲ್ನಲ್ಲಿ ಈ ಘಟನೆ ನಡೆದಿತ್ತು.