ರಾಜ್ಯ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಬಂಧನ.
![](https://veekshakanews.com/wp-content/uploads/2024/06/Praveen-nettaru-NIA-750x450-1.webp)
ಹೊಸದಿಲ್ಲಿ: 2022ರ ಜುಲೈನಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಭೀಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿಯನ್ನು ಎನ್ಐಎ ಮಂಗಳವಾರ ಬಂಧಿಸಿದೆ.
![](https://veekshakanews.com/wp-content/uploads/2024/06/Praveen-nettaru-NIA-750x450-1.webp)
ರಿಯಾಜ್ ಬಂಧನದಿಂದ ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಮನ್ಸೂರ್ ಪಾಷಾ ಜತೆಗೆ ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್ ನನ್ನು ಬಂಧಿಸಿದ ಒಂದು ತಿಂಗಳ ನಂತರ ಈ ಬಂಧನವಾಗಿದೆ. ಬಂಧಿತ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎನ್ಐಎ ಹೇಳಿಕೆ ತಿಳಿಸಿದೆ.