ತಾಲೂಕು ಸುದ್ದಿ
ಮಂಗಳೂರು: ಭೀಕರ ರಸ್ತೆ ಅಪಘಾತ : ಯೆನಪೋಯ ಕಾಲೇಜಿನ ವಿದ್ಯಾರ್ಥಿ ಜಾಸೀಮ್ ಮೃತ್ಯು.
ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಎ.ಜೆ ಆಸ್ಪತ್ರೆ ಬಳಿ ಇಂದು ಸಂಜೆ ನಡೆದಿದೆ.
ಮೃತ ಯುವಕನನ್ನು ಯೆನಪೋಯ ಕಾಲೇಜಿನ ವಿದ್ಯಾರ್ಥಿ, ಮೇಲ್ಕಾರ್ ಸಮೀಪದ ರೇಂಗೇಲ್ ನಿವಾಸಿ ಹನೀಫ್ ರವರ ಪುತ್ರ ಜಾಸೀಮ್ (20) ಎಂದು ಗುರುತಿಸಲಾಗಿದೆ.
ಸಹ ಸವಾರನಿಗೆ ಗಂಭೀರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.