ಕೃಷಿ

ಅನ್ನದಾತರಿಗೆ ಸಿಹಿಸುದ್ದಿ : ಪಿಎಂ ಕಿಸಾನ್ 14ನೇ ಕಂತಿನ ಹಣ ಖಾತೆಗೆ ಸೇರಲು ದಿನಗಣನೆ ಆರಂಭ

Click below to Share News

ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ 2023 ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು ಎಂಬ ಮಾಹಿತಿ ದೊರೆತಿದೆ.
ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಕೇಂದ್ರ ಸರ್ಕಾರ ಈವರೆಗೆ 2,000 ರೂಗಳ 13ಕಂತುಗಳನ್ನು ಬಿಡುಗಡೆ ಮಾಡಿದ್ದು. ಮಾರ್ಚ್ 27ರಂದು ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 13ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು ಎಂದು ಊಹಿಸಲಾಗಿದ್ದು.
ಮೇ 3ನೇ ವಾರದಂದು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.ಮಾಧ್ಯಮ ವರದಿಗಳ ಪ್ರಕಾರ, ಈ ಮುಂದಿನ ಕಂತು ಪಿಎಂ ಕಿಸಾನ್ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಮೇ 26 ಮತ್ತು 31 ರ ನಡುವೆ ಜಮಾ ಮಾಡಬಹುದು ಎಂದು ತೋರುತ್ತದೆ. ಇಲ್ಲವಾದಲ್ಲಿ ರೈತರು ಜೂನ್ ತಿಂಗಳಿನಲ್ಲಿ ಈ ಹಣವನ್ನು ಪಡೆಯಬಹುದು. ಆದರೆ ಈ ಹಣವನ್ನು ರೈತರಿಗೆ ಯಾವಾಗ ನೀಡಲಾಗುವುದು ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.
ಒಂದು ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 3 ಬಾರಿ PM ಕಿಸಾನ್ ಯೋಜನೆಯ ಹಣ ರಿಲೀಸ್ ಮಾಡುತ್ತದೆ. ಏಪ್ರಿಲ್ ಜುಲೈವರೆಗಿನ ಒಂದು ಅವಧಿ, ಆಗಸ್ಟ್ ನಿಂದ ನವೆಂಬರ್ವರೆಗಿನ ಇನ್ನೊಂದು ಅವಧಿ, ಹಾಗು ಡಿಸೆಂಬರ್ ನಿಂದ ಮಾರ್ಚ್ ಮತ್ತೊಂದು ಮೂರನೇ ಅವಧಿಯಲ್ಲಿ PM ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಸರ್ಕಾರ ಒಟ್ಟು 6 ಸಾವಿರ ರೂಗಳನ್ನು ಒಂದು ವರ್ಷದಲ್ಲಿ ಫಲಾನುಭವಿ ರೈತರಿಗೆ ನೀಡುತ್ತದೆ. ಕರ್ನಾಟಕ ಸರ್ಕಾರ ಇದಕ್ಕೆ ಹೆಚ್ಚುವರಿಯಾಗಿ ಇನ್ನೆರಡು ಕಂತುಗಳನ್ನು ನೀಡುತ್ತದೆ. ಅಂದರೆ ಕರ್ನಾಟಕದಲ್ಲಿ ಫಲಾನುಭವಿ ರೈತರ ಖಾತೆಗಳಿಗೆ ಒಂದು ವರ್ಷದಲ್ಲಿ 10,000 ರೂಗಳಷ್ಟು ಹಣ ಜಮೆ ಆಗುತ್ತದೆ.
2019 ಫೆಬ್ರುವರಿಯಲ್ಲಿ ಆರಂಭವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸಣ್ಣ ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒದಗಿಸುವ ಸಹಾಯಧನವಾಗಿದೆ. ಮೊದಲಿಗೆ 5 ಎಕರೆಯೊಳಗಿನ ಜಮೀನು ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆ ಸೀಮಿತವಾಗಿತ್ತು. ಈಗ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ.


PM ಕಿಸಾನ್ ಯೋಜನೆ ಪಡೆಯಲು ಅರ್ಹ ರೈತರು ಯಾರು?
ಕೃಷಿ ಜಮೀನು ಮಾಲೀಕರಾಗಿರಬೇಕು ಸರ್ಕಾರಿ ನೌಕರಿಯಲ್ಲಿರಬಾರದು, ಪಿಂಚಣಿ ದಾರರಿರಬಾರದು ಶಾಸಕ, ಸಂಸದ, ಮಂತ್ರಿ ಇತ್ಯಾದಿ ಅಧಿಕಾರದಲ್ಲಿರಬಾರದು, ಹಿಂದೆಯೂ ಇದ್ದಿರಬಾರದು ವೈದ್ಯ, ಎಂಜಿನಿಯರ್, ಲಾಯರ್ ಇತ್ಯಾದಿ ವೃತ್ತಿಗಳಲ್ಲಿರಬಾರದು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳನ್ನು ಹೇಗೆ ಸಂಪಾದಿಸುವುದು?

ಪಿಎಂ ಕಿಸಾನ್ ಯೋಜನೆಯಡಿ ಅರ್ಹರಾಗಿರುವ ರೈತರು, ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಹಿಂದೆ ನಮೂದಿಸಿದ ವಿವರಗಳನ್ನು ಬದಲಾಯಿಸಬಹುದು ಅಥವಾ ಸಂಪಾದಿಸಬಹುದು. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಸಂಪಾದಿಸಲು, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.

ಹಂತ 1: PM ಕಿಸಾನ್ ಪೋರ್ಟಲ್‌ಗೆ ಹೋಗಿ.

ಹಂತ 2: ಬಲಭಾಗದಲ್ಲಿ, “ಆಧಾರ್ ವೈಫಲ್ಯದ ದಾಖಲೆಗಳನ್ನು ಸಂಪಾದಿಸಿ” ಕ್ಲಿಕ್ ಮಾಡಿ.

ಹಂತ 3: ನೀವು ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ, ಹೊಸ ವಿಂಡೋ ತೆರೆಯುತ್ತದೆ.

ಹಂತ 4: ಇಲ್ಲಿ, ನೀವು ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ದಾಖಲೆಗಳನ್ನು ಹುಡುಕಬಹುದು.

ಹಂತ 5: ವಿವರಗಳಲ್ಲಿ ಒಂದನ್ನು ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

ಹಂತ 6: ಹುಡುಕಾಟ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 7: ನಿಮ್ಮ ವಿಫಲವಾದ ಅಥವಾ ತಪ್ಪು ದಾಖಲೆಗಳ ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನಂತರ ನೀವು ದಾಖಲೆಗಳನ್ನು ಸಂಪಾದಿಸಲು ಮುಂದುವರಿಯಬಹುದು.


ಕೇಂದ್ರ ಬಜೆಟ್ 2023: ಸರ್ಕಾರವು ರೈತರಿಗೆ ಕ್ರಮಗಳನ್ನು ಸಕ್ರಿಯಗೊಳಿಸುತ್ತದೆ, ಸಬ್ಸಿಡಿ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ

ಕೇಂದ್ರ ಬಜೆಟ್ 2023: ವಿತ್ತ ಸಚಿವೆ ನಿರ್ಮಮಾಲಾ ಸೀತಾ ರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ತೋಟಗಾರಿಕೆ ಯೋಜನೆಗಳಿಗೆ 2200 ಕೋಟಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಪರಿಸರ ಸಂರಕ್ಷಿಸುವ ಜತೆಗೆ ಅಭಿವೃದ್ಧಿ ಮಾಡುತ್ತೇವೆ ಎಂದರು. ಅವರು ಈ ಗ್ರೀನ್ ಗ್ರೋತ್ ಎಂಬ ಹೆಸರನ್ನು ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ರ ಕೇಂದ್ರ ಬಜೆಟ್‌ನಲ್ಲಿ ರಾಗಿ ಉತ್ಪಾದನೆ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಆದಾಗ್ಯೂ, 2023 ರ ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ರೈತರ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಕೃಷಿ ಭೂಮಿ ಎಂದರೇನು?
ಕೃಷಿ ಭೂಮಿಯನ್ನು ಸಸ್ಯಗಳು ಮತ್ತು ಬೆಳೆಗಳನ್ನು ಬೆಳೆಯುವ ಭೂಪ್ರದೇಶ ಎಂದು ವ್ಯಾಖ್ಯಾನಿಸಬಹುದು. ಈ ಕೃಷಿಯು ಸ್ವಾವಲಂಬನೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿರಬಹುದು. ಕೃಷಿಯ ತಂತ್ರಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಆ ದೇಶದ ಹವಾಮಾನ, ನೀರಿನ ಲಭ್ಯತೆ ಮತ್ತು ಆಹಾರದ ಆದ್ಯತೆಗಳಿಂದ ಪ್ರಭಾವಿತವಾಗಿರುತ್ತದೆ.

ಭಾರತ ಸರ್ಕಾರವು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯನ್ನು ಸಹ ಸ್ಥಾಪಿಸಿದೆ ಮತ್ತು ಪಿಎಂ ಕಿಸಾನ್ ಅಥವಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಯೋಜನೆ) ನಂತಹ ಸಬ್ಸಿಡಿ ಯೋಜನೆಗಳನ್ನು ಹೊರತಂದಿದೆ.

ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಜೊತೆಗೆ, ಜನರು ಫಾರ್ಮ್‌ಹೌಸ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ತೋಟದ ಮನೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಕೃಷಿಭೂಮಿಯ ನಡುವೆ ನೆಲೆಸಿರುವ ವಸತಿ ಆವರಣವಾಗಿದೆ. ಭಾರತದ ನಾಗರಿಕರು ಭಾರತದ ಯಾವುದೇ ಭಾಗದಲ್ಲಿ ಕೃಷಿ ಭೂಮಿಯನ್ನು ಖರೀದಿಸಬಹುದಾದರೂ, ಬುಡಕಟ್ಟು ಜನಾಂಗದ ಬಹುಸಂಖ್ಯಾತ ಪ್ರದೇಶಗಳಲ್ಲಿ ಮತ್ತು ಕೆಲವು ರಾಜ್ಯಗಳಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿ ಭೂ ಮಾಲೀಕತ್ವದ ಮೇಲೆ ಕೆಲವು ನಿರ್ಬಂಧಗಳಿವೆ.
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯಲ್ಲಿ ಕೋಟ್ಯಂತರ ರೈತರು ನೊಂದಾಯಿಸಿಕೊಂಡಿದ್ದಾರೆ. ಕೆವೈಸಿ ಪ್ರಕ್ರಿಯೆ ವೇಳೆ ಕೆಲವರ ಹೆಸರು ಕೈಬಿಟ್ಟಿರಬಹುದು. ಅಂಥವರು ಅಥವಾ ಈವರೆಗೂ ಯೋಜನೆ ಪಡೆಯದ ಅರ್ಹ ರೈತರು ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳಲು ಅವಕಾಶ ಇದೆ.


ಆನ್ಲೈನ್ ಮೂಲಕವೂ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು:
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ http://www.pmkisan.gov.in ಇಲ್ಲಿಗೆ ಹೋಗಿ ಮುಖ್ಯಪುಟದಲ್ಲಿ ಕಾಣುವ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಮೊದಲ ಸಾಲಿನಲ್ಲಿರುವ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡ ಅಲ್ಲಿ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಿ. ಬಳಿಕ ರಾಜ್ಯವನ್ನು ಆಯ್ಕೆ ಮಾಡಿ ಓಟಿಪಿ ಪಡೆಯಿರಿ. ನಂತರ ಕೇಳಲಾಗುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನಂತರ ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತುಂಬಿಸಿ ಅದನ್ನು ಸೇವ್ ಮಾಡಿ. ಬೇಕಾದರೆ ಈ ಅರ್ಜಿಯ ಪ್ರಿಂಟೌಟ್ ಪಡೆಯಬಹುದು.
ಆನ್ಲೈನ್ ಮೂಲಕ ಸಾಧ್ಯವಾಗದಿದ್ದರೆ ನಿಮ್ಮ ಗ್ರಾಮದ ಸಮೀಪದ ಪಂಚಾಯಿತಿ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಜಮೀನು ಪಹಣಿ ನೀಡಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೊಂದಾಯಿಸಬಹುದು.
ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ಪಟ್ಟಿ ವೀಕ್ಷಿಸಬಹುದು . ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ನಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಪಡೆಯಬಹುದು. ಫಲಾನುಭವಿ ಸ್ಥಿತಿಗತಿ, ಫಲಾನುಭವಿ ಪಟ್ಟಿ ಇತ್ಯಾದಿಯನ್ನು ವೀಕ್ಷಿಸಬಹುದು.


Click below to Share News

Leave a Reply

Your email address will not be published. Required fields are marked *

Back to top button
error: Content is protected !!