ಸಮಗ್ರ ಸುದ್ದಿ

ಮೇ 18ರಂದು ಕರಾವಳಿಯಾದ್ಯಂತ ಬಹುನಿರೀಕ್ಷಿತ ಗೋಸ್ಮರಿ ಫ್ಯಾಮಿಲಿ ತುಳು ಸಿನಿಮಾ ಬಿಡುಗಡೆ

Click below to Share News

ಮಂಗಳೂರು: ಯೋಧ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಲನಚಿತ್ರ ‘ಗೋಸ್ಮಾರಿ ಫ್ಯಾಮಿಲಿ’ ಮೇ 18ಕ್ಕೆ ಬಿಡುಗಡೆಗೊಳ್ಳಲಿದೆ.
ಯೋಧ ಮೋಷನ್ ಪಿಕ್ಚರ್ಸ್ ಯೌಟ್ಯೂಬ್ ನಲ್ಲಿ ಚಲನಚಿತ್ರ ಚಿತ್ರ ಟ್ರೈಲರ್ ನ್ನು ಈಗಾಗಲೇ ಬಹಳಷ್ಟು ಜನ ವೀಕ್ಷಣೆಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ಕೆಳಗಿನ ಲಿಂಕ್ ಬಳಸಿ ಚಲನಚಿತ್ರ ದ ಟ್ರೈಲರ್ ನ್ನು ವೀಕ್ಷಣೆ ಮಾಡಬಹುದು : https://youtu.be/hH2p2dLQpjI

ಚಲನಚಿತ್ರವನ್ನು ಶಕುಂತಲಾ ಆಂಚನ್ ನಿರ್ಮಿಸಿ, ಪಿಎಲ್ ರವಿ ಅವರ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ, ಆಕಾಶ್ ಪ್ರಜಾಪತಿ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಿತ್ ನಾಯಕ್ ಮತ್ತು ಸುಮಿತ್ ಪರ್ನಾಮಿ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.


‘ಗೋಸ್ಮರಿ ಫ್ಯಾಮಿಲಿ’ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಮತ್ತು ಸಮತಾ ಅಮೀನ್ ಮುಖ್ಯ ಭೂಮಿಕೆಯಲ್ಲಿದ್ದು , ಜೊತೆಗೆ ತುಳುನಾಡಿನ ಹಾಸ್ಯ ದಿಗ್ಗಜರಾದ ಡಾ.ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮತ್ತು ಉಮೇಶ್ ಮಿಜಾರ್ ನಟಿಸಿದ್ದಾರೆ. ದೀಪಕ್ ರೈ ಪಾಣಾಜೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮಾಣಿಬೆಟ್ಟು ಮತ್ತು ತುಳುನಾಡಿನ ಯುವ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!