ಮಾಹಿತಿ

ಅಂಚೆ ಇಲಾಖೆಯಿಂದ ಹೊಸ ಸೇವೆ ಕ್ಯುಆರ್ ಕೋಡ್ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆ

Click below to Share News

ಮಂಗಳೂರು : ಕೇಂದ್ರ ಸರಕಾರವು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ದೇಶಾದ್ಯಂತ ನಗದು ರಹಿತ ಹಣದ ವ್ಯವಹಾರ ಮಾಡುವ ಬಗ್ಗೆ ಉತ್ತೇಜನ ನೀಡುತ್ತ ಬಂದಿದ್ದು , ಭಾರತೀಯ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ವ್ಯಾಪಾರಿಗಳಿಗೆ ರಿಕ್ಷಾ ಚಾಲಕರಿಗೆ , ಸೆಲೂನ್‌ಗಳಲ್ಲಿ ತರಕಾರಿ / ಹೂ / ಹಣ್ಣಿನ ಅಂಗಡಿ , ಮೊಬೈಲ್ ಅಂಗಡಿ ಇತ್ಯಾದಿಗಳಲ್ಲಿ ಕ್ಯೂಆರ್ ಕೋಡ್ ಬಳಸಿ ಹಣಸ್ವೀಕರಿ ಸುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ .

ಈ ಸೇವೆಯನ್ನು ಪ್ರಾರಂಭಿಸಲು ಐಪಿಪಿಬಿ ( ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ) ಖಾತೆ ಹೊಂದಿರ ಬೇಕಾಗಿರುತ್ತದೆ ಹಾಗೂ ಅದನ್ನು ಅಂಚೆ ಸಿಬಂದಿಯವರು ಕ್ಯುಆರ್ ಕೋಡ್‌ಗೆ ಸಂಯೋಜಿಸಿ ಕೊಡುತ್ತಾರೆ ವ್ಯಾಪಾರಿಗಳು ಕ್ಯುಆರ್ ಕೋಡ್ ಸ್ಯಾನ್ ಮೂಲಕ ಸ್ವೀಕರಿಸಲಾದ ಮೊತ್ತವನ್ನು ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ಮುಖಾಂತರ ಸ್ವೀಕರಿಸ ಬಹುದು . ಮೊಬೈಲ್‌ನಲ್ಲಿ ಐಪಿಪಿಬಿ ಖಾತೆಯ ಕ್ಯುಆರ್ ಬಳಸಿ ಯಾವುದೇ ಬ್ಯಾಂಕಿಂಗ್ ವ್ಯವ ಹಾರ ಮಾಡಬಹುದು . ಸ್ಥಳದಲ್ಲೇ ಐಪಿಪಿಬಿ ಖಾತೆಯನ್ನು ಕೂಡ ಮಾಡಿಕೊಡಲಾಗುವುದು ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ .


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!