ಮಾಹಿತಿ

ಅಯುಷ್ಮಾನ್ ಕಾರ್ಡ್ ಒಳಗೊಂಡಂತೆ ವೈದ್ಯರ ಚೀಟಿ ಇದೀಗ ಡಿಜಿಟಲ್‌

Click below to Share News

ವೈದ್ಯಕೀಯ ಇತಿಹಾಸವನ್ನು ಸಾರುವ ವೈದ್ಯರು ನೀಡುವ ಪರೀಕ್ಷೆ, ತಪಾಸಣೆ ಅಥವಾ ಔಷಧದ ಮಾಹಿತಿ ಒಳಗೊಂಡ ಮಾಹಿತಿ ಇದೀಗ ಡಿಜೀಟಲಿಕರಣಗೊಂಡಿದೆ. ವೈದ್ಯಕೀಯ ಇತಿಹಾಸ ಅನ್ನುವುದು ಒಂದು ಕತೆ ಇದ್ದಂತೆ. ಇದು ನಮ್ಮ ಆರೋಗ್ಯದ ಹಂತವನ್ನು ಹೇಳುತ್ತದೆ ಮತ್ತು ಭವಿಷ್ಯವನ್ನು ಕೂಡ ಊಹಿಸಿಕೊಳ್ಳಲು ಸಹಕಾರಿ. ಪ್ರತಿ ರೋಗದ ಲಕ್ಷ ಣ, ಆಕ್ರಮಣ, ಅನಾರೋಗ್ಯ, ಔಷಧಗಳು, ರೋಗ ನಿರ್ಣಯ, ಹಿಂದಿನ ಚಿಕಿತ್ಸೆಯ ಯೋಜನೆಗಳು ಪ್ರತಿಯೊಂದು ಕೂಡ ಒಂದನ್ನೊಂದು ಆಧರಿಸಿರುತ್ತದೆ. ಅಲ್ಲದೇ ರೋಗಿಯ ಆರೈಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇದೀಗ ಸಾಂಪ್ರದಾಯಿಕ ವಿಧಾನ ಬದಲಾಗಿದೆ. ಅಂದರೆ ವೈದ್ಯಕೀಯ ದಾಖಲೆ ವಿವರ ಅಥವಾ ವೈದ್ಯರ ಚೀಟಿ ಇದೀಗ ಡಿಜೀಟಲಿಕರಣವಾಗಿದೆ.ಹೌದು, ಎಲೆಕ್ಟ್ರಾನಿಕ್‌ ವೈದ್ಯಕೀಯ ದಾಖಲೆ ಇದೀಗ ಗಮನ ಸೆಳೆಯುತ್ತಿದ್ದು, ಆರೋಗ್ಯ ಸುರಕ್ಷೆ ವಿಚಾರದಲ್ಲಿ ಚಿಕಿತ್ಸೆಗೆ ರೂಪಿಸುವ ಯೋಜನೆಯ ಪರಿಣಾಮ ರೋಗಿಯ ಸ್ವಂತ ವೈದ್ಯಕೀಯ ಇತಿಹಾಸವನ್ನು ಆಧರಿಸಿಯೇ ಇರುವ ಜತೆಗೆ ಆರೋಗ್ಯದ ವಿವರವನ್ನು ನೇರವಾಗಿ ಅವಲಂಬಿಸಿರುತ್ತದೆ. ಆದರೆ ನಮ್ಮ ದಾಖಲೀಕರಣವು ದೊಡ್ಡ ಮಟ್ಟದಲ್ಲಿ ಅವಲಂಬಿಸಿರುವುದು ನೆನಪುಗಳು ಹಾಗೂ ಹಿಂದಿನ ಭೇಟಿಗಳಲ್ಲಿ ನೀಡಿದ ಚೀಟಿಗಳನ್ನು ಆಧರಿಸಿ.
ಆಯುಷ್ಮಾನ್ ಕಾರ್ಡ್ ಹೊಸ ಡಿಜಿಟಲ್ ಸೇವೆ | ದೇಶಾದ್ಯಂತ ಬಳಸಲು ಉಪಯುಕ್ತ ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಮೂಲಕ ತುರ್ತು ಸಂದರ್ಭದಲ್ಲಿ ತನ್ನ ಫಲಾನುಭವಿಗಳಿಗೆ ಆಸ್ಪತ್ರೆ ವೆಚ್ಚಗಳ ವಿರುದ್ಧ ಹಣಕಾಸಿನ ಭದ್ರತೆಗಳನ್ನು ಒದಗಿಸಲು ಪ್ರಾರಂಭಿಸಿರುವ ಆರೋಗ್ಯ ವಿಮಾ ಯೋಜನೆಯಾಗಿದೆ. ದೇಶದಾದ್ಯಂತ ಆರೋಗ್ಯ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.


ದೇಶದ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಕೇಂದ್ರ ಸರಕಾರವು ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ, PMJAY ಅಡಿಯಲ್ಲಿ ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದ್ರೋಗಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದ್ದು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಜನರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಬಡ ಕುಟುಂಬಕ್ಕೆ (ಬಿಪಿಎಲ್‌) ವಾರ್ಷಿಕ 5 ಲಕ್ಷ ರೂ. ಮೊತ್ತದ ವೈದ್ಯಕೀಯ ಚಿಕಿತ್ಸಾ ವೆಚ್ಚ ಉಚಿತವಾಗಿದ್ದು, ಬಡತನದ ರೇಖೆಗಿಂತ ಮೇಲೆ ಇರುವ ಎಪಿಎಲ್‌ ಕಾರ್ಡ್ ಹೊಂದಿದ ಕುಟುಂಬಕ್ಕೆ, ಚಿಕಿತ್ಸಾ ವೆಚ್ಚದ ಶೇ.30ರಷ್ಟು ನೆರವಿನ ಜೊತೆಗೆ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ತನಕ ಸಿಗಲಿದೆ.ನಾಲ್ಕು ವಿಧವಾದ ಆರೋಗ್ಯ ಸಂಬಂಧಿ ದಾಖಲೆಗಳ ಡಿಜಿಟಲೀಕರಣ ಇದೀಗ ಈ ಯೋಜನೆಯಡಿಯಲ್ಲಿ ನಡೆಯುತ್ತಿದೆ.

ಆಯುಷ್ಮಾನ್‌ ಭಾರತ್‌ ಹೆಲ್ತ್‌ ಕಾರ್ಡ್‌ (ಆಭಾ ಕಾರ್ಡ್‌)
ಈಗ ಬಳಕೆಯಾಗುತ್ತಿರುವ ಆಯುಷ್ಮಾನ್‌ ಭಾರತ್‌ ಹೆಲ್ತ್ ಕಾರ್ಡ್‌ ವಿತರಣೆ ಯಾಗುತ್ತಿರುವುದನ್ನು ಮುಂದಿನ ದಿನಗಳಲ್ಲಿ ನಿಲ್ಲಿಸಿ, ಇದರ ಬದಲಿಗೆ ಎಲ್ಲೆಡೆ ಉಪಯೋಗಿಸಬಲ್ಲ ಎಟಿಎಂ ಕಾರ್ಡ್‌ನಂತಹ ಡಿಜಿಟಲ್‌ ಮಾದರಿಯ ಆಭಾ ಕಾರ್ಡ್‌ ವಿತರಿಸಲಿದೆ. ಆಧಾರ್‌ ಕಾರ್ಡ್‌ನ ಮಾದರಿಯಲ್ಲಿ 14 ಡಿಜಿಟ್‌ನ ಪ್ರತ್ಯೇಕ ಗುರುತಿನ ಕಾರ್ಡ್ ಇದಾಗಿದೆ.ಇದರ ನೋಂದಣಿ ಕಾರ್ಯವನ್ನು ಗ್ರಾಮ ಪಂಚಾಯತ್‌ನ ಗ್ರಾಮ ಒನ್‌ ಕೇಂದ್ರಗಳಲ್ಲಿ ಉಚಿತವಾಗಿ ಕೆಲವು ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದಾಗಿದೆ. ದಾಖಲೆಗಳು ಆಧಾರ್‌ ಕಾರ್ಡ್‌ ಪ್ರತಿ, ಆಧಾರ್‌ ಕಾರ್ಡ್‌ ನೋಂದಣಿ ಮಾಡಿದ ಮೊಬೈಲ್‌ ನಂಬರ್‌ ಹಾಗೂ ರೇಷನ್‌ ಕಾರ್ಡ್‌ ಪ್ರತಿ ಬೇಕಾಗಿದ್ದು, ಇವೆಲ್ಲವನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.ಈ ಡಿಜಿಟಲ್‌ ಕಾರ್ಡ್‌ ಹೊಂದಿದವರಿಗೆ ಮೊದಲಿನಂತೆಯೇ ನೋಂದಾಯಿತ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಸರಕಾರಿ ಯೋಜನೆ ಸೌಲಭ್ಯ ದೊರೆಯಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ವರೆಗೆ ರೋಗಕ್ಕೆ ಅನುಸಾರವಾಗಿ ಪ್ಯಾಕೇಜ್‌ ದರ ಉಚಿತವಾಗಿ ದೊರೆಯಲಿದ್ದು, ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಪ್ಯಾಕೇಜ್‌ ದರದ ಶೇ. 30ರಷ್ಟು ಗರಿಷ್ಠ 1.5 ಲಕ್ಷ ರೂ. ವರೆಗೆ ನೆರವು ದೊರೆಯಲಿದೆ.
ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ದೊರೆಯುತ್ತದೆ. ಇಲ್ಲದಿದ್ದರೆ, ರೆಫರಲ್ ನೀಡಲಾಗುತ್ತದೆ. ಈ ರೀತಿ ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.ವೈದ್ಯಕೀಯ ದಾಖಲೆಗಳನ್ನು ವೈಯಕ್ತಿಕವಾಗಿ ಇಲೆಕ್ಟ್ರಾನಿಕ್ ಮೂಲಕ ಕಾರ್ಡಿನೊಂದಿಗೆ ಸಂಯೋಜಿಸಿದರೆ ಆ ವ್ಯಕ್ತಿಯು ದೇಶದ ಯಾವುದೇ ವೈದ್ಯರಲ್ಲಿ ಚಿಕಿತ್ಸೆಗೆ ಹೋದರೆ ಸಂಪೂರ್ಣ ಆರೋಗ್ಯ ಕೈಪಿಡಿಯ ಮಾಹಿತಿ ದೊರೆಯಲಿದೆ.


ಇಎಂಆರ್‌ ಅಂದರೆ ಏನು? ಇಎಂಆರ್‌ ಅಂದರೆ ಆರೋಗ್ಯ ಸುರಕ್ಷೆ ಕ್ಷೇತ್ರದಲ್ಲಿ ತಾಂತ್ರಿಕ ಪ್ರಗತಿ. ರೋಗಿಯ ಆರೋಗ್ಯಕ್ಕೆ ಸಂಬಂಧಿಸಿ ವೈದ್ಯರು ಸಾಂಪ್ರದಾಯಿಕ ಪೇಪರ್‌ ಆಧಾರಿತ ಪದ್ಧತಿಯಲ್ಲಿ ನೀಡುವ ದಾಖಲೆಗಳು ಎಲ್ಲಿಯೂ ಮರೆಯಾಗದಂತೆ ತಡೆಯುವಂಥದ್ದು. ಡಿಜಿಟಲ್‌ ರೂಪ ಹಾಗೂ ದಾಖಲೆ, ಮಾಹಿತಿಯ ಸಂಗ್ರಹ ವ್ಯವಸ್ಥೆ, ಇದರಿಂದ ರೋಗಿಯ ವೈದ್ಯಕೀಯ ಇತಿಹಾಸ ಹಾಗೂ ದಾಖಲೆಗಳು ಡಿಜಿಟಲೀಕರಣಗೊಳ್ಳುತ್ತದೆ. ಅದೂ ಇರು ಪ್ರತಿ ಸಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ. ಇಎಂಆರ್‌ ತಂತ್ರಜ್ಞಾನವು ನಿಮ್ಮ ಸಂಪೂರ್ಣ ಆರೋಗ್ಯ ಸಂಬಂಧಿ ದಾಖಲೆಯನ್ನು ವಾಸ್ತವಿಕವಾಗಿ, ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಒದಗಿಸುವ ವ್ಯವಸ್ಥೆ.

ಆರೋಗ್ಯ ಸಂಬಂಧಿ ದಾಖಲೆಗಳ ರೆಕಾರ್ಡಿಂಗ್‌, ದಾಖಲೀಕರಣ, ಹಿಂಬಾಲಿಸುವುದು ಹಾಗೂ ಹಂಚಿಕೆಯನ್ನು ಇಎಂಆರ್‌ ಮೂಲಕ ಮಾಡಿಕೊಳ್ಳಬಹುದು. ಅಲ್ಲದೇ ದಾಖಲೆಗಳು ಭವಿಷ್ಯದಲ್ಲಿ ವಿಮೆ ಪೂರೈಕೆದಾರರು, ಸಂಶೋಧಕರು, ಔಷಧ ಕೈಗಾರಿಕೆಗಳಿಗೆ ಕೂಡ ಅನುಕೂಲ ಒದಗಿಸಲಿದೆ. ದಾಖಲೆಗಳ ವರ್ಗೀಕರಣ ಆಧಾರ್‌ ದಾಖಲೆಗೆ ಅಳವಡಿಕೆಯಾಗುತ್ತದೆ. ಇದರಿಂದ ಆಧಾರ್‌ ಯುಐಡಿ ಸಂಖ್ಯೆ ನೀಡಿದರೆ ರೋಗಿಯ ಇಎಂಆರ್‌ ದಾಖಲೆ ಲಭ್ಯವಾಗುತ್ತದೆ. ಇಎಂಆರ್‌ನ ಪ್ರಯೋಜನಗಳು
ರೋಗಿಗಳಿಗೆ ಅನುಕೂಲ ಗಮನಿಸಿದಾಗ ಪ್ರತಿ ಸಾರಿ ವೈದ್ಯರ ಬಳಿ ತೆರಳುವಾಗ ಹಿಂದಿನ ಎಲ್ಲಾ ಪೇಪರ್‌ ದಾಖಲೆಗಳನ್ನು ಜತೆಯಲ್ಲಿ ಕೊಂಡೊಯ್ಯುವ ಸಮಸ್ಯೆ ತಪ್ಪಿಸುತ್ತದೆ. ಅದಲ್ಲೇ ಅದನ್ನು ಜೋಪಾನವಾಗಿ ಕಾಪಾಡಿಟ್ಟುಕೊಳ್ಳುವ ಅಗತ್ಯ ತಪ್ಪಿಸುತ್ತದೆ. ಸುರಕ್ಷೆಯ ವಿಚಾರದಲ್ಲಿ ರೋಗಿಗಳಿಗೆ ಇದು ಉತ್ತಮ ಕಾಳಜಿಯನ್ನು ತೋರಿಸುತ್ತದೆ.

ಇಎಂಆರ್‌ ಲಾಭ ಕೇವಲ ಒಂದು ವಿಧದಲ್ಲಿ ಮಾತ್ರ ಅಗುತ್ತಿಲ್ಲ. ವೈದ್ಯರಿಗೆ ತಾವು ನೀಡಿದ ಪ್ರಿಸ್ಕ್ರಿಪ್ಶನ್‌ ಹಾಗೂ ವರದಿಗಳ ಸ್ಪಷ್ಟತೆಗೆ ಸಹಕಾರಿ.

ಆರೋಗ್ಯ ಸಂಬಂಧಿ ದಾಖಲೆಗಳ ಸಂಗ್ರಹ, ನಕಲು ಸಮಸ್ಯೆಯ ನಿವಾರಣೆ, ಸಮಯದ ಉಳಿತಾಯ ಮಾಡುತ್ತದೆ. ಈ ನಿಟ್ಟಿನಲ್ಲಿ 24ಘ್ಕಿಗಿ7 ಇದು ಕಾರ್ಯ ನಿರ್ವಹಿಸುತ್ತದೆ.

ಆರೋಗ್ಯ ಪೂರೈಕೆದಾರರಿಗೂ ಇದು ಉತ್ತಮ ಸಹಕಾರಿ. ರೋಗಿಗಳ ಅಲರ್ಜಿಗೆ ಸರಿಯಾದ ಕಾರಣ ಅರಿಯಲು, ಸೂಕ್ತ ಔಷಧ ನೀಡಲು, ನಿಖರ ಚಿಕಿತ್ಸೆ ಒದಗಿಸಲು, ಹಿಂದಿನ ಚಿಕಿತ್ಸೆಗಳ ಬಗ್ಗೆ ಅರಿಯಲು ಹಾಗೂ ಚಿಕಿತ್ಸೆಯ ಯೋಜನೆ ರೂಪಿಸಲು ಸಹಕಾರಿ.ರೋಗಿಯು ಒಬ್ಬ ವೈದ್ಯರಿಂದ ಇನ್ನೊಬ್ಬ ವೈದ್ಯರಿಗೆ ಬದಲಾವಣೆಯಾದಾಗ ಇದು ಅತ್ಯಂತ ಸಹಕಾರಿ.

ಒಂದು ಸಾರಿ ಇಎಂಆರ್‌ನ್ನು ಅಳವಡಿಸಿಕೊಂಡರೆ ಇದು ಸೀಮಾತೀತ ಸಂವಹನಕ್ಕೆ ವೇದಿಕೆಗಳನ್ನು ನಿರ್ಮಿಸಿ ಮಾಡಿಕೊಡುತ್ತದೆ. ಹೊಸ ವೈದ್ಯರಿಗೆ ರೋಗಿಯ ಹಳೆಯ ಚಿಕಿತ್ಸೆಯ ಮಾಹಿತಿ ಸಮಗ್ರವಾಗಿ ಸಿಕ್ಕಿ ಬಿಡುತ್ತದೆ.

ರೋಗಿಯ ರೋಗದ ಪ್ರಮುಖ ಲಕ್ಷ ಣವನ್ನು ದಾಖಲೀಕರಿಸುತ್ತದೆ. ಅಲ್ಲದೇ ದೀರ್ಘಕಾಲದವರೆಗೂ ಅದನ್ನು ಜೋಪಾನವಾಗಿ ಇರಿಸಿಕೊಳ್ಳಲು ಸಹಕರಿಸುತ್ತದೆ.

ದೀರ್ಘಾವಧಿಯ ನಂತರವೂ ರೋಗಿಗೆ ಸಮಸ್ಯೆ ಎದುರಾದಾಗ ಹಿಂದಿನ ಇತಿಹಾಸ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಅನುಕೂಲ ಮಾಡಿಕೊಡುತ್ತದೆ.


Click below to Share News

Related Articles

Leave a Reply

Your email address will not be published. Required fields are marked *

Check Also
Close
Back to top button
error: Content is protected !!