ಮಾಹಿತಿ

ಚಾಟಿಂಗ್ ರಹಸ್ಯವಾಗಿಡಲು ವಾಟ್ಸಪ್‌ನಲ್ಲಿ ಬಂದಿದೆ ಚಾಟ್‌ ಲಾಕ್‌ ಫೀಚರ್‌

Click below to Share News

ನವದೆಹಲಿ : ವಾಟ್ಸಪ್‌ ಪರಸ್ಪರ ರವಾನಿಸಿದ ಸಂದೇಶಗಳನ್ನು ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಕಾಪಾಡುವ ಹೊಸ ಫೀಚರ್‌ ಒಂದನ್ನು ವಾಟ್ಸಪ್‌ ಅನಾವರಣಗೊಳಿಸಿದೆ. ಹೀಗಾಗಿ ಒಂದು ವೇಳೆ ಮೊಬೈಲ್‌ನಲ್ಲಿ ವಾಟ್ಸಪ್‌ ಆ್ಯಪ್‌ ಅನ್ನು ಯಾರೇ ವೀಕ್ಷಿಸಿದರೂ, ಚಾಟ್‌ ಲಾಕ್‌ ಆಗಿರುವ ಸಂದೇಶಗಳನ್ನು ಯಾರೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಫೀಚರ್‌ ಆಯ್ಕೆ ಮಾಡಿಕೊಂಡರೆ ಸಂದೇಶ ಬಂದಾಗ ನೋಟಿಫಿಕೇಷನ್‌ನಲ್ಲೂ ಅದು ಕಾಣದು.


ಏನಿದು ಚಾಟ್‌ ಲಾಕ್‌ ?
ಇದು ವಾಟ್ಸಪ್‌ನ (WhatsApp) ಮಾತೃ ಸಂಸ್ಥೆ ಮೆಟಾ (Meta) ಬಿಡುಗಡೆ ಮಾಡಿರುವ ಹೊಸ ಫೀಚರ್‌ (Feature). ಈ ಆಪ್ಷನ್‌ ಅನ್ನು ಬಳಸಿಕೊಂಡರೆ ನಾವು ಇನ್ಯಾವುದೇ ವಾಟ್ಸಪ್‌ ಬಳಕೆದಾರರೊಂದಿಗೆ ನಡೆಸಿದ ಚಾಟ್‌ (Chat) ಸಂಪೂರ್ಣ ರಹಸ್ಯವಾಗಿರುತ್ತದೆ (Secret). ಹೀಗೆ ವಿನಿಮಯ ಮಾಡಿಕೊಂಡ ಸಂದೇಶಗಳು (Messages) ಬೇರೊಂದು ಫೋಲ್ಡರ್‌ನಲ್ಲಿ (Folder) ಸಂಗ್ರಹವಾಗುವ ಕಾರಣ ಅದು ಯಾರಿಗೂ ಕಾಣಿಸದು. ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ (Chat Lock) ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.8.2 ಅಪ್‌ಡೇಟ್‌ಗಾಗಿ ಕಳೆದ ತಿಂಗಳ ವಾಟ್ಸ್‌ಆ್ಯಪ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿತ್ತು. ಭವಿಷ್ಯದ ಅಪ್‌ಡೇಟ್‌ನಲ್ಲಿ ಇದನ್ನು ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು WaBetaInfo ಏಪ್ರಿಲ್‌ನಲ್ಲಿ ವರದಿ ಮಾಡಿತ್ತು. ವಾಟ್ಸ್‌ಆ್ಯಪ್ ಡೆವಲಪರ್‌ಗಳು ಈ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ತಿಳಿದುಬಂದಿತ್ತು. 
ಅದು ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ. ಈ ಲಾಕ್ ಆಗಿರುವ ಚಾಟ್‌ಗಳನ್ನು ಪ್ರತ್ಯೇಕ ವಿಭಾಗದಲ್ಲಿ ವೀಕ್ಷಿಸಲು ಬಳಕೆದಾರರಿಗೆ ಸಾಧ್ಯವಾಗುವಂತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಇದು ಪಾಸ್‌ಕೋಡ್‌ 
ಇಲ್ಲದ ಯಾರಿಗಾದರೂ ಈ ಚಾಟ್‌ಗಳನ್ನು ವೀಕ್ಷಿಸಲು ಅಸಾಧ್ಯವಾಗಬಹುದು ಎಂದೂ ವರದಿಯಾಗಿತ್ತು.

ಚಾಟ್‌ ಲಾಕ್‌ ಹೀಗೆ ಉಪಯೋಗಿಸಿ
• ವಾಟ್ಸಪ್‌ನ ಹೊಸ ಅಪ್‌ಡೇಟ್‌ ವರ್ಷನ್‌ ಡೌನ್‌ಲೋಡ್‌ ಮಾಡಿ
• ವಾಟ್ಸಪ್‌ ಓಪನ್‌ ಮಾಡಿ, ನೀವು ಯಾವ ಚಾಟ್‌ ಲಾಕ್‌ ಮಾಡಬೇಕೋ ಅಲ್ಲಿಗೆ ಹೋಗಿ
• ಅಲ್ಲಿ ಕಾಂಟ್ಯಾಕ್ಟ್ ಅಥವಾ ಗ್ರೂಪ್‌ನ ಪ್ರೊಫೈಲ್‌ ಪಿಕ್ಚರ್‌ ಮೇಲೆ ಕ್ಲಿಕ್‌ ಮಾಡಿ
• ಅಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಮೆನು ಕೆಳಗೆ ಚಾಟ್‌ ಲಾಕ್‌ ಕಾಣಿಸುತ್ತದೆ
• ಚಾಟ್‌ ಲಾಕ್‌ ಎನೇಬಲ್‌ ಮಾಡಿ ಮತ್ತು ಪಾಸ್‌ವರ್ಡ್‌ ಬಳಸಿ ಖಚಿತಪಡಿಸಿ

ಚಾಟ್‌ ಲಾಕ್‌ ಅನ್‌ಲಾಕ್‌ ಹೇಗೆ?
• ವಾಟ್ಸಪ್‌ ಓಪನ್‌ ಮಾಡಿ ಹೋಮ್‌ಪೇಜ್‌ಗೆ ಹೋಗಿ
• ಸ್ಕ್ರೀನ್‌ ಸ್ವೈಪ್‌ ಮಾಡಿದರೆ ಲಾಕ್ಡ್‌ ಚಾಟ್‌ ಸಿಗುತ್ತದೆ
• ನಿಮಗೆ ಬೇಕಾದ ಚಾಟ್‌ ಅನ್ನು ಟ್ಯಾಪ್‌ ಮಾಡಿ
• ಪಾಸ್‌ವರ್ಡ್‌ ಬಳಸಿ, ಅದನ್ನು ಖಚಿತಪಡಿಸಿದರೆ ಅದು ಅನ್‌ಲಾಕ್‌ ಆಗುತ್ತದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!