ವಿದೇಶ

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿ

Click below to Share News

ವಾಷಿಂಗ್ಟನ್ : ಜೂನ್ 23 ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತರಳಿದ್ದ ಐವರು ಪ್ರವಾಸಿಗರು ಜಲಸಮಾಧಿಯಾಗಿರುವ ಬಗ್ಗೆ ಓಷನ್ ಗೇಟ್ ಸಂಸ್ಥೆ ಖಚಿತ ಪಡಿಸಿದೆ.

ಸಾಹಸಯಾತ್ರೆಯ ಅಂಗವಾಗಿ ಬ್ರಿಟನ್‌ನ ಶ್ರೀಮಂತ ಉದ್ಯಮಿ ಹಮೀಶ್ ಹಾರ್ಡಿಂಗ್, ಸ್ಟೋಕ್ಷನ್ ರಶ್, ಫ್ರಾನ್ಸ್‌ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್ ಹೆನ್ರಿ ನಾರ್ಗೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದ್‌ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್, ಓವನ್ ಗೇಟ್ ಕಂಪನಿಯ ಸಿಇಒ ಸ್ಟಾಕ್‌ಟನ್ ರಶ್ ಮೃತಪಟ್ಟಿದ್ದಾರೆ.

92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿದೆ, ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅವಶೇಷಗಳು ಟೈಟಾನಿಕ್ ನಿಂದ 1,600 ಅಡಿಗಳು (488 ಮೀಟರ್) ಅಡಿಯಲ್ಲಿ ಕಂಡುಬಂದಿವೆ ಎನ್ನಲಾಗಿದೆ.

ರೊಬೊಟಿಕ್ ಡೈವಿಂಗ್ ವಾಹನವು ಸಮುದ್ರತಳದಲ್ಲಿ ಶಿಲಾಖಂಡರಾಶಿಗಳ ಜಾಗದಲ್ಲಿ ಹಡಗಿನ ಐದು ಪ್ರಮುಖ ತುಣುಕುಗಳನ್ನು ಗುರುತಿಸಿದೆ. ಅಪಾರವಾದ ನೀರಿನ ಒತ್ತಡದಿಂದ ಅಥವಾ ಯಾವುದೋ ತಾಂತ್ರಿಕ ದೋಷದಿಂದ ಉಂಟಾದ ಸ್ಫೋಟದಲ್ಲಿ ಸಬ್ ಮೇರಿನಲ್ಲಿದ್ದವರು ಕ್ಷಣ ಮಾತ್ರದಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೂರ್ಣ ತನಿಖೆಯನ್ನು ಕೈಗೊಳ್ಳಲು ಅವಶೇಷಗಳನ್ನು ಮರುಪಡೆಯಬೇಕಾಗಿದೆ ಆದರೆ ಆಗಲು ನಿಖರ ಕಾರಣವನ್ನು ಗುರುತಿಸಲು ಕಷ್ಟವಾಗಬಹುದು ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಇಂಜಿನಿಯರಿಂಗ್ ಪ್ರೊಫೆಸರ್ ರೋಡ್ರಿಕ್ ಸ್ಮಿತ್ ಹೇಳಿದ್ದಾರೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!