ವಿದೇಶ

ಅಮೆರಿಕ ಇತಿಹಾಸದಲ್ಲಿಯೇ
ಮೊದಲ ಪ್ರಕರಣ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ.!!

Click below to Share News

ವಾಷಿಂಗ್ಟನ್: ವಂಚನೆ ಮತ್ತು ಸಂಚು ಆರೋಪಗಳ ಅಡಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಜಾರ್ಜಿಯಾ ಜೈಲಿನಲ್ಲಿ ಬಂಧಿಸಲಾಗಿದೆ. ಆದರೆ ಕೂಡಲೇ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಇತರೆ 18 ಮಂದಿ ಜತೆ ಸೇರಿಕೊಂಡು ಪಿತೂರಿ ನಡೆಸಿದ್ದರು ಎಂಬ ಆರೋಪ ಟ್ರಂಪ್ ಮೇಲಿದೆ. ಅವರು ಅಟ್ಲಾಂಟಾದ ಫುಲ್ಲೋನ್ ಕೌಂಟಿ ಜೈಲಿನ ಒಳಗೆ ಸರಿಸುಮಾರು 30 ನಿಮಿಷ ಕಳೆದರು. ಬಳಿಕ ಬಿಡುಗಡೆಯಾಗಿ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳಂತೆಯೇ

ಶರಣಾಗತರಾದ 77 ವರ್ಷದ ಟ್ರಂಪ್, ಬಂಧನ ಪ್ರಕ್ರಿಯೆ ವೇಳೆ ಮಗ್ ಶಾಟ್ (ಭುಜದ ಮೇಲಿನ ಮುಖದ ಚಿತ್ರ) ಫೋಟೋ ತೆಗೆಸಿಕೊಳ್ಳುವಂತಾಗಿದೆ. ಅಮೆರಿಕದ ಇತಿಹಾಸದಲ್ಲಿ ಹಾಲಿ ಅಥವಾ ಯಾವುದೇ ಮಾಜಿ ಅಧ್ಯಕ್ಷರು ಈ ರೀತಿ ಜೈಲಿಗೆ ಹೋಗಿದ್ದು ಇದು ಮೊದಲ ನಿದರ್ಶನವಾಗಿದೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!