ಉದ್ಯೋಗ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಅಪ್ರೆಂಟೀಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

Click below to Share News

ಪುತ್ತೂರು : ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದಿಂದ ಶಿಶಿಕ್ಷು ಅಧಿನಿಯಮದಡಿ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಐಟಿಐ ಅಭ್ಯರ್ಥಿಗಳಿಗೆ ಲಭ್ಯವಿರುವ ಸ್ಥಾನಗಳು: ಒಂದು ವರ್ಷ ಅವಧಿಯ ಮೆಕ್ಯಾನಿಕಲ್ ಡೀಸೆಲ್ 40 ಸ್ಥಾನ, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್ 10 ಸ್ಥಾನ, ಇಲೆಕ್ಟಿಶಿಯನ್ 18 ಸ್ಥಾನ, ಮೋಟರ್ ಮೆಕ್ಯಾನಿಕ್ ವೆಹಿಕಲ್ 19 ಸ್ಥಾನ, ವೆಲ್ಡರ್ 5 ಸ್ಥಾನ, ಫಿಟ್ಟರ್ 5 ಸ್ಥಾನ, ಪಾಸಾ 10 ಸ್ಥಾನ.ಎಸೆಸೆಲ್ಸಿ ಅಭ್ಯರ್ಥಿಗಳಿಗೆ 2 ವರ್ಷ ಅವಧಿಗೆ ಮೆಕ್ಯಾನಿಕ್ ಡೀಸೆಲ್ ನಲ್ಲಿ 29 ಸ್ಥಾನಗಳು ಲಭ್ಯವಿರುತ್ತವೆ.
ಆಯ್ಕೆಗೊಂಡ ಅಭ್ಯರ್ಥಿಗಳ ತರಬೇತಿಯು ಒಂದು ವರ್ಷದ್ದಾಗಿದೆ.ಪರಿಶಿಷ್ಟ ಜಾತಿಯವರಿಗೆ 1:8 ಮೀಸಲಾತಿ, ಪರಿಶಿಷ್ಟ ಪಂಗಡಕ್ಕೆ 1:20, ಅಂಗವಿಕಲರಿಗೆ 3 ಮತ್ತು ಮಾಜಿ ಸೈನಿಕ ಮಕ್ಕಳಿಗೆ ಪ್ರತಿಶತ 3ರಷ್ಟು ನೀಡಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯು 18 ವರ್ಷ ತುಂಬಿರಬೇಕು ಹಾಗೂ 26 ವರ್ಷಗಳಿಗಿಂತ ಕಡಿಮೆ ಇರಬೇಕು. ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನೇರ ಸಂದರ್ಶನದ ವಿಳಾಸ. ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ : ನೇರ ಸಂದರ್ಶನ ನವೆಂಬರ್ 04ರಂದು ನಡೆಯಲಿದೆ.

ಷರತ್ತುಗಳು. ಆಸಕ್ತರು ಅರ್ಜಿಗಳನ್ನು ಆಯೋಗದ ಅಂತರ್ಜಾಲ www.apprenticeshipindia.org. ವೆಬ್‌ಸೈಟ್ ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸುವುದು. (ನೋಂದಣಿ ಪ್ರತಿ ಸಲ್ಲಿಸದೇ ತರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು).
ಅರ್ಜಿ ಸಲ್ಲಿಸುವ http://www.apprenticeshipindia.org ಹೋಂ ಪೇಜ್‌ನಲ್ಲಿ ಅಭ್ಯರ್ಥಿಗಳು Registration-candidate Registration ನಲ್ಲಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು ನಂತರ ಇ-ಮೇಲ್ ನಲ್ಲಿ ಆಕ್ಟಿವೇಷನ್ (activation) ಮಾಡಿದ ನಂತರ ಇ-ಮೇಲ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್- ಲಾಗಿನ್ ಪಾಸ್ ವರ್ಡ್ ಆಗಿರುತ್ತದೆ.

ಲಾಗಿನ್ ಆದ ನಂತರ candidate dashboardನಲ್ಲಿ ವಿವರಗಳನ್ನು ನಮೂದಿಸುವುದು. ಪೂರ್ಣ ವಿವರಗಳನ್ನು ನಮೂದಿಸಿ, ಸಂಬಂಧಿಸಿದ ದಾಖಲಾತಿಗಳನ್ನು ಆಪ್‌ಡೇಟ್ ಮಾಡಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಶಿಶಿಕ್ಷುಗಳು ಆನ್‌ಲೈನ್ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವಿವರಗಳು (ಹೆಸರು, ಹುಟ್ಟಿದ ದಿನಾಂಕ, ಪೋಷಕರ ಹೆಸರು) ಒಂದಕ್ಕೊಂದು ತಾಳೆಯಾಗುವಂತಿರಬೇಕು. ಇಲ್ಲವಾದಲ್ಲಿ ಆನ್‌ಲೈನ್ ನೋಂದಣಿಯಲ್ಲಿ ಅಡಚಣೆ ಉಂಟಾದರೆ ಯಾವುದೇ ರೀತಿಯ ಹೊಣೆಗಾರಿಕೆ ಹೊಂದುವುದಿಲ್ಲ.

ಸಂಸ್ಥೆ ಶಿಶಿಕ್ಷುಗಳು ಕಾಯಿದೆ 1961 ರನ್ವಯ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಿಸಬಹುದು.


Click below to Share News

Leave a Reply

Your email address will not be published. Required fields are marked *

Back to top button
error: Content is protected !!