ಉದ್ಯೋಗ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನೇಮಕಾತಿ 2023.
Manglore: Dakshina Kannada District Court Recruitment 2023 Apply Online

Click below to Share News

ಮಂಗಳೂರು: ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Dakshina Kannada District Court Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ಸಂಸ್ಥೆ : ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಮಂಗಳೂರು
ವೇತನ ಶ್ರೇಣಿ: 27,650 ರೂ. ರಿಂದ 52,650 ರೂ.
ಹುದ್ದೆಗಳ ಸಂಖ್ಯೆ: 54
ಉದ್ಯೋಗ ಸ್ಥಳ: ಮಂಗಳೂರು

ಹುದ್ದೆಗಳ ವಿವರ:
ಶೀಘ್ರಲಿಪಿಗಾರರು(Stenographer Grade – III) – 10
ಬೆರಳಚ್ಚುಗಾರರು (Typist) – 06
ಬೆರಳಚ್ಚು ನಕಲುಗಾರರು (Typist-Copyist) – 02 ಜವಾನ (Peon) – 36

ಶೈಕ್ಷಣಿಕ ಅರ್ಹತೆ:
ಶೀಘ್ರಲಿಪಿಗಾರರು(Stenographer Grade – II) -12th, ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ.
ಬೆರಳಚ್ಚುಗಾರರು (Typist) – 12th, ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ.
ಜವಾನ – 10th, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಕನ್ನಡ ಓದಲು ಬರೆಯಲು ಬರಬೇಕು.

ಈ ಲಿಂಕ್ ಬಳಸಿ ನಮ್ಮ YouTube ಚಾನೆಲ್ Subscribe ಮಾಡಿ. https://youtube.com/@VEEKSHAKANEWS-rj6ri?si=199SIJTGThii-Jw2

ವೇತನ ಶ್ರೇಣಿ:
ಶೀಘ್ರಲಿಪಿಗಾರರು (Stenographer Grade – II) – 27,650 ರೂ. ರಿಂದ 52,650 ರೂ.

ಬೆರಳಚ್ಚುಗಾರರು (Typist) – 21,400 ರೂ. ರಿಂದ 42,000 .

ಬೆರಳಚ್ಚು ನಕಲುಗಾರರು (Typist-Copyist) – 21,400 ರೂ. ರಿಂದ 42,000 ರೂ.
ಜವಾನ (Peon) – 17,000ರೂ ರಿಂದ 28,950 ರೂ.

ವಯೋಮಿತಿ:
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಮಂಗಳೂರು ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, Cat- 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ: 200 ರೂ.
SC/ST/Cat-I ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06-11-2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-12-2023

ಪ್ರಮುಖ ಲಿಂಕ್’ಗಳು:
ಆನ್‌ಲೈನ್ ಅರ್ಜಿ: https://dk.dcourts.gov.in/notice-category/recruitments/
ಅಧಿಕೃತ ವೆಬ್ ಸೈಟ್: https://dk.dcourts.gov.in/


Click below to Share News

Leave a Reply

Your email address will not be published. Required fields are marked *

Back to top button
error: Content is protected !!