ದೇಶ

ಚಂದ್ರಯಾನ-3: ರಸಪ್ರಶ್ನೆ ಸ್ಪರ್ಧೆ, ವಿಜೇತರಿಗೆ ಸಿಗಲಿದೆ ₹1ಲಕ್ಷ ಬಹುಮಾನ.!!

Click below to Share News

ಬೆಂಗಳೂರು: ಚಂದ್ರಯಾನ–3 ಯೋಜನೆ ಯಶಸ್ವಿ ಬೆನ್ನಲ್ಲೇ ಕೇಂದ್ರ ಸರ್ಕಾರ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ.

ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿನ ಈವರೆಗಿನ ಸಾಧನೆಗಳ ಕುರಿತ ರಸಪ್ರಶ್ನೆ ಇದಾಗಿದೆ. ಅದರಲ್ಲೂ ಚಂದ್ರನ ಅಂಗಳಕ್ಕಿಳಿಯುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಸಾಧನೆಯ ಮೈಲಿಗಲ್ಲುಗಳ ಕುರಿತ ಪ್ರಶ್ನೆಗಳು ಈ ಸ್ಪರ್ಧೆಯಲ್ಲಿ ಇರಲಿವೆ.
ಇದರಲ್ಲಿ ಭಾರತೀಯರೆಲ್ಲರೂ ಪಾಲ್ಗೊಳ್ಳಬಹುದು ಎಂದು ಇಸ್ರೊ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಲಿಂಕ್ ಬಳಸಿ.
https://isroquiz.mygov.in/

ಈವರೆಗೂ ಲಕ್ಷ ಮೀರಿ ಜನ ಈ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಬಹುಮಾನ ಗೆದ್ದ ವಿಜೇತರಿಗೆ ₹1ಲಕ್ಷ ನಗದು ಬಹುಮಾನ ಸಿಗಲಿದೆ. ಎರಡನೇ ಬಹುಮಾನ ₹75 ಸಾವಿರ ಹಾಗೂ ಮೂರನೇ ಬಹುಮಾನ ₹50 ಸಾವಿರ ಸಿಗಲಿದೆ. ಮೊದಲ ಸಮಾಧಾನಕರ ಬಹುಮಾನವಾಗಿ ನೂರು ಜನರಿಗೆ ತಲಾ ₹2 ಸಾವಿರ ಸಿಗಲಿದೆ. 2ನೇ ಸಮಾಧಾನಕರ ಬಹುಮಾನವಾಗಿ 200 ಜನರಿಗೆ ತಲಾ ₹1 ಸಾವಿರ ಸಿಗಲಿದೆ.
ಸರಳವಾದ ಅರ್ಜಿಯಲ್ಲಿ ಸ್ವವಿವರ ತುಂಬುವ ಮೂಲಕ ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಬಹುದು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!