ದೇಶ

ನೂತನ ಸಂಸತ್ ಭವನ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನೂತನವಾಗಿ ನಿರ್ಮಾಣವಾಗಿರುವ ಸಂಸತ್‌ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಬೆಳಗ್ಗೆ 7.15ಕ್ಕೆ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ನಮಸ್ಕಾರ ಮಾಡಿದ ಪ್ರಧಾನಿ ಮೋದಿ, ನಂತರ 7.30ಕ್ಕೆ ಸಂಸತ್ ಭವನಕ್ಕೆ ಆಗಮಿಸಿ ಗಣಪತಿ ಹೋಮದಲ್ಲಿ ಭಾಗಿಯಾದರು. ಪ್ರಧಾನಿ ಮೋದಿ ಅವರ ಜೊತೆಗೆ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರೂ ಇದ್ದರು. ಪೂಜೆ ಮುಗಿದ ನಂತರ ರಾಜದಂಡ ಸೆಂಗೋಲ್‌ಗೆ ದೀರ್ಘದಂಡ ನಮಸ್ಕಾರ ಮಾಡಿದ ಪ್ರಧಾನಿ ನಂತರ ಸ್ಪೀಕರ್ ಕುಳಿತುಕೊಳ್ಳುವ ಆಸನದ ಸಮೀಪ ಪ್ರತಿಷ್ಠಾಪನೆ ಮಾಡಿದರು.

ಸರ್ವಧರ್ಮದ ಗುರುಗಳಿಂದ ಪೂಜೆ
ಲೋಕಸಭಾ ಸ್ಪೀಕರ್ ಕುಳಿತು ಕೊಳ್ಳುವ ಆಸನದ ಸಮೀಪ ರಾಜದಂಡ ಸೆಂಗೋಲ್‌ ಅನ್ನು ಪ್ರತಿಷ್ಠಾಪನೆ ಮಾಡಿದ ಬಳಿಕ ಸ್ಪೀಕರ್ ಮತ್ತು ಪ್ರಧಾನಿ ಮೋದಿ ದೀಪ ಪ್ರಜ್ವಲನೆ ಮಾಡಿದರು. ಬಳಿಕ ಪುನಃ ಪೂಜಾ ಸ್ಥಳಕ್ಕೆ ಬಂದ ಪ್ರಧಾನಿ ಮೋದಿ ಮತ್ತು ಸ್ಪೀಕರ್ ಸರ್ವ ಧರ್ಮದ ಗುರುಗಳ ಮುಂದೆ ಕುಳಿತುಕೊಂಡರು. ನಂತರ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳ ನಿಯಮದಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಸಂಸತ್‌ ಭವನದ ಕಾಮಗಾರಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಕಾರ್ಮಿಕರಿಗೆ ನರೇಂದ್ರ ಮೋದಿ ಅವರು ಶಾಲು ಹೊದೆಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರುಗಳು, ಸಂಸದರು ಸೇರಿದಂತೆ ವಿವಿಧ ಪ್ರಮುಖರು ಭಾಗಿಯಾಗಿದ್ದರು.

ಟ್ವೀಟ್‌ನಲ್ಲಿ ಸಂತಸ ವ್ಯಕ್ತಪಡಿಸಿದ ಮೋದಿ
ನೂತನ ಸಂಸತ್ ಭವನ ಉದ್ಘಾಟನೆಗೊಂಡ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಭಾರತದ ಸಂಸತ್ತಿನ ಹೊಸ ಕಟ್ಟಡವು ಉದ್ಘಾಟನೆಗೊಳ್ಳುತ್ತಿದ್ದಂತೆ, ನಮ್ಮ ಹೃದಯಗಳು ಮತ್ತು ಮನಸ್ಸುಗಳು ಹೆಮ್ಮೆ, ಆತ್ಮವಿಶ್ವಾಸ ಮತ್ತು ಭರವಸೆಯಿಂದ ತುಂಬಿವೆ. ಈ ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಿರಲಿ, ಕನಸುಗಳನ್ನು ಸೃಷ್ಟಿಸಿ ಮತ್ತು ಅವುಗಳನ್ನು ಈಡೇರಿಸುವಂತಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿದ್ದಾರೆ.

Related Articles

Leave a Reply

Your email address will not be published. Required fields are marked *

/** * External dependencies */ import { Component } from 'react'; class CheckoutSlotErrorBoundary extends Component { state = { errorMessage: '', hasError: false }; static getDerivedStateFromError( error ) { if ( typeof error.statusText !== 'undefined' && typeof error.status !== 'undefined' ) { return { errorMessage: ( <> { error.status } { ': ' + error.statusText } ), hasError: true, }; } return { errorMessage: error.message, hasError: true }; } render() { const { renderError } = this.props; const { errorMessage, hasError } = this.state; if ( hasError ) { if ( typeof renderError === 'function' ) { return renderError( errorMessage ); } return

{ errorMessage }

; } return this.props.children; } } export default CheckoutSlotErrorBoundary;
error: Content is protected !!