ದೇಶ

ದೇಶಕ್ಕೆ ಬಿಗ್ ಶಾಕ್ ನೀಡಿದ ಆರ್ ಬಿಐ -2 ಸಾವಿರ ರೂ . ಮುಖಬೆಲೆ ನೋಟ್ ಬ್ಯಾನ್

Click below to Share News

ದೇಶದಲ್ಲಿ 2 ಸಾವಿರ ರೂ . ಮುಖಬೆಲೆ ನೋಟ್ ಬ್ಯಾನ್ . ನೋಟ್ ಬದಲಾವಣೆ ಮಾಡಲು ಸೆ . 30. ರವರೆಗೆ ಅವಕಾಶ ಕಲ್ಪಿಸಲಾಗಿದೆ .
ಅಲ್ಲದೆ ನೋಟ್ ಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್ ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ . ಇಂದಿನಿಂದಲೇ ಪ್ರಿಂಟಿಂಗನ್ನು ಆರ್ ಬಿಐ ನಿಲ್ಲಿಸಿದೆ . ಕ್ಲೀನ್ ನೋಟ್ ನಿಯಮದಡಿ ನೋಟ್ ಹಿಂಪಡೆಯಲಾಗಿದೆ .


ಎರಡು ಸಾವಿರ ರೂ . ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮೇ 23 ರಿಂದ ಸೆ . 30 ರ ತನಕ ಅವಕಾಶ ಕಲ್ಪುಸಲಾಗಿದೆ . ಪ್ರಕಾರ 2023 ಸೆಪ್ಟೆಂಬರ್ 30 ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ . ಆದರೆ , ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ . ಆರ್‌ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ . 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ .

ಆರ್‌ಬಿಐ ನೀಡಿರುವ ಮಾಹಿತಿ
● ನೋಟ್ ಹಿಂಪಡೆಯಲು ಕಾರಣ ಏನು ಗೊತ್ತಾ ?
• ಈಗ ಚಲಾವಣೆಯಲ್ಲಿರುವ 2,000 ರೂ ಮುಖಬೆಲೆಯ ನೋಟುಗಳಲ್ಲಿ ಶೇ . 89 ರಷ್ಟು ನೋಟುಗಳನ್ನು 2017 ರ ಮಾರ್ಚೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂಥವು . ಇವುಗಳ ಕಾಲಾವಧಿ 4 5 ವರ್ಷ ಮಾತ್ರ . ಹೀಗಾಗಿ , ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ .
• 2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲದಿರುವುದು ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇರುವುದು 2008 ರ ಮಾರ್ಚ್ 31 ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು . ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ . 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು . ಈ ಸಂಖ್ಯೆಯು 2023 ಮಾರ್ಚ್ 31 ಕ್ಕೆ ಶೇ . 10.8 ಕ್ಕೆ ಬಂದಿಳಿದಿದೆ . ಅಲ್ಲದೇ ಜನರೂ ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ . 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!