ವಿಶೇಷ

Bajaj Qute : ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಜಾಜ್ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಕಾರ್.

Click below to Share News

ಒಂದು ಕಾಲದಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುವಂತ ಕಾರ್ ಎಂದರೆ ಅದು ಟಾಟಾ ಸಂಸ್ಥೆಯ Nano Car ಆಗಿತ್ತು. ಆದರೆ ಈಗ ಅದೇ ರೀತಿಯ ಚಿಕ್ಕ ಕಾರ್ ಅನ್ನು ಬಜಾಜ್ ಸಂಸ್ಥೆ Bajaj Nano Car ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು ಇದು ಬೈಕುಗಳಿಗಿಂತಲೂ ಅಧಿಕ ಮೈಲೇಜ್ ಅನ್ನು ನೀಡುವುದು ಮಾತ್ರವಲ್ಲದೆ ಬೆಲೆಯಲ್ಲಿ ಕೂಡ ಕೈಗೆಟಕುವ ದರದಲ್ಲಿದೆ.

Bajaj Qute ಕಾರಿನ ಬಗ್ಗೆ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು. 2018ರಲ್ಲಿ ಇದು ಲಾಂಚ್ ಆಗಿದ್ದರೂ ಕೂಡ ಪ್ರೈವೇಟ್ ಗಾಡಿಯ ರೂಪದಲ್ಲಿ ಇದು ಮಾರುಕಟ್ಟೆಗೆ ಬಂದಿರಲಿಲ್ಲ. ಇದು ಮಾರುಕಟ್ಟೆಗೆ ಬಂದಾಗ 2.48 ಲಕ್ಷ ರೂಪಾಯಿಗಳ ಮೌಲ್ಯದಲ್ಲಿ ಇದ್ದು ಇದೀಗ ಮತ್ತೆ ಮಾರುಕಟ್ಟೆಗೆ ಪ್ರೈವೇಟ್ ಕಾರಿನ ರೂಪದಲ್ಲಿ ಈಗ ಮತ್ತೆ ಅಧಿಕೃತವಾಗಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದ್ದು ಇದರ ಬೆಲೆ 2.80 ಲಕ್ಷ ರೂಪಾಯಿ ಆಗಿರಲಿದೆ ಎಂಬುದಾಗಿ ತಿಳಿದು ಬಂದಿದ್ದು 4 ಸೀಟರ್ ಕಾರ್ ಇದಾಗಲಿದೆ. ಇದು ಯಾವ ಕೆಟಗರಿಯಲ್ಲಿ ಸೇರುತ್ತದೆ ಎಂಬುದನ್ನು ನೋಡುವುದಾದರೆ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಡುವಿನ ವಾಹನವಾಗಿ ಕಾಣಿಸುತ್ತದೆ. Non Transportation ವಾಹನದ ಕೆಟಗರಿಯಲ್ಲಿ Bajaj Qute ಅನ್ನು ಸೇರಿಸಲಾಗಿದೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ. 216cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಈ ಕಾರು ಹೊಂದಿದೆ. ಇದರ ಟಾಪ್ ಸ್ಪೀಡ್ ಗಂಟೆಗೆ 70ರಿಂದ 80 ಕಿಲೋಮೀಟರ್ ಆಗಿದೆ. ಪೆಟ್ರೋಲ್ ಹಾಗೂ CNG ಎರಡು ವೇರಿಯಂಟ್ಗಳು ಕೂಡ ಈ ಬಾರಿ ಮಾರುಕಟ್ಟೆಗೆ ಕಾಲಿಡಲಿದೆ.

ಆರು ಸ್ಪೀಡ್ ಗೇರ್ ಬಾಕ್ಸ್ ಗಳು ಇದರಲ್ಲಿ ಇದ್ದು 36 ಕಿಲೋಮೀಟರ್ ಮೈಲೇಜ್ ಅನ್ನು ಕೂಡ ಪ್ರತಿ ಲೀಟರ್ಗೆ ಈ ಕಾರು ನೀಡಲಿದೆ. Airbag, Disc Brake ನಂತಹ ಫೀಚರ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ನೋಡಬಹುದು ಆದಷ್ಟು ಶೀಘ್ರದಲ್ಲಿಯೇ ಇದು ಮಾರುಕಟ್ಟೆಗೆ ಬರುವುದನ್ನು ಕೂಡ ನೀವು ಕಾಣಬಹುದಾಗಿದೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!