ವಿಶೇಷ

2025 ರ ವೇಳೆಗೆ ತೆರೆಯಲಿದೆ ಭಾರತದ ಅತ್ಯಂತ ಎತ್ತರದ ಶಾಪಿಂಗ್ ಮಾಲ್

Click below to Share News

ನಮ್ಮ ಭಾರತದ ಅನೇಕ ನಗರಗಳಲ್ಲಿ ಹಲವಾರು ಆಧುನಿಕ ಹಾಗು ಸುಂದರವಾದ ಶಾಪಿಂಗ್‌ ಮಾಲ್‌ಗಳಿವೆ. ಇಲ್ಲಿ ಪ್ರಪಂಚದ ಜನಪ್ರಿಯ ಬ್ರ್ಯಾಂಡ್‌ ಬಟ್ಟೆಗಳು, ಚಪ್ಪಲಿ, ಫ್ಯಾಶನ್‌ ವಸ್ತುಗಳಿಂದ ಹಿಡಿದು ಎಲ್ಲಾ ರೀತಿಯ ಸೌಂದರ್ಯ ಉತ್ಪನ್ನಗಳನ್ನು ಹೊಂದಿರುತ್ತದೆ. ನಾಲಿಗೆ ಹಾಗು ಹೊಟ್ಟೆಯನ್ನು ತುಂಬಿಸುವ ಫುಡ್ ಕೋರ್ಟ್‌ಗಳು ಕೂಡ ಇಲ್ಲಿ ಸಾಕಷ್ಟಿರುತ್ತವೆ. ಒಟ್ಟಾರೆ ಒಂದೇ ಸೂರಿನಲ್ಲಿ ಮನರಂಜನೆ, ಆಹಾರ ಹಾಗು ಶಾಪಿಂಗ್‌ ಮಾಡಬಹುದು.
2025 ರ ವೇಳೆಗೆ ಭಾರತದ ಅನೇಕ ಅದ್ಭುತ ಮಾಲ್‌ಗಳಿಗೆ ಸೆಡ್ಡು ಹೊಡೆಯುವಂತಹ ಮತ್ತೊಂದು ಮಾಲ್‌ ತಲೆ ಎತ್ತಲಿದೆ. ವಾಸ್ತವವಾಗಿ, ಇದು ಭಾರತದ ಅತಿ ಎತ್ತರದ ಮಾಲ್‌ ಆಗಲಿದೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ. ಇದು ಭಾರತದ ಅತಿ ಎತ್ತರವಾದ ಮಾಲ್‌ಗೆ ನೆಲೆಯಾಗಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಹಾಗು ಸಂದರ್ಶಕರನ್ನು ಬರ ಮಾಡಿಕೊಳ್ಳಲು 2025 ರವರೆಗೆ ಕಾಯಬೇಕಾಗುತ್ತದೆ.

ಈ ಸುಂದರವಾದ ಮಾಲ್‌ಗೆ ‘ಸಯಾ ಸ್ಟೇಟಸ್‌’ ಎಂಬ ಹೆಸರನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ, ಮಾಲ್‌ನ ನಿರ್ಮಾಣ ಕಾರ್ಯವು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಟ್ಟಡದ ನಿರ್ಮಾಣ ಶೇಕಡಾ 25 ರಷ್ಟು ಪೂರ್ಣಗೊಂಡಿದೆ. ಇನ್ನು, ಕಟ್ಟಡದ ಎತ್ತರವು ಸುಮಾರು 150 ಅಡಿ, 9 ಮಹಡಿಗಳನ್ನು ಹೊಂದಿದೆ. ಮಾಲ್‌ನ ಪ್ರತಿಯೊಂದು ಮಹಡಿಗಳು ಐಷಾರಾಮಿ ಬ್ರ್ಯಾಂಡ್‌ಗಳ ಅಂಗಡಿಗಳನ್ನು ಹೊಂದಿರಲಿದೆ. ಮಾಲ್‌ ನಿರ್ಮಾಣದ ವೆಚ್ಚ ಬರೋಬ್ಬರಿ 2000 ಕೋಟಿಯಾಗಿದ್ದು, ಮಾಲ್‌ ಪ್ರೇಮಿಗಳನ್ನು ಬೆರಗುಗೊಳಿಸುವಂತಹ ಆಕರ್ಷಣೆಗಳನ್ನು ಹೊಂದಿರಲಿದೆ.

ಸಿಂಗಾಪುರದ ಪ್ರಸಿದ್ಧ ವಾಸ್ತುಶಿಲ್ಪ ಸಂಸ್ಥೆಯಾದ ಡಿಪಿ ಆರ್ಕಿಟೆಕ್ಟ್ಸ್ ಈ ಕಟ್ಟಡವನ್ನು ವಿನ್ಯಾಸಗೊಳಿಸುತ್ತಿದೆ. ಪ್ರತಿ ಚದರ ಅಡಿಗೆ INR 18000 ರಿಂದ INR 40,000 ವರೆಗೆ ಚಿಲ್ಲರೆ ಸ್ಥಳವನ್ನು ಮಾರಾಟ ಮಾಡಲಾಗುವುದು ಎಂದು ಸುದ್ದಿ ಮಾಡಿದೆ.


ಮಾಲ್‌ನಲ್ಲಿ ಏನೆಲ್ಲಾ ಇರಲಿದೆ?
ಮಾಲ್ 9 ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಹೈಪರ್‌ಮಾರ್ಕೆಟ್ ಇರಲಿದೆ. ನಾಲ್ಕನೇ ಮಹಡಿಯಿಂದ ಒಂಬತ್ತನೇ ಅಂತಸ್ತಿನವರೆಗೆ ಬಹು ಮಟ್ಟದ ಪಾರ್ಕಿಂಗ್‌ ಜೊತೆಗೆ ಬೇಸ್‌ಮೆಂಟ್‌ ಪಾರ್ಕಿಂಗ್‌ ಇರುತ್ತದೆ. 1600 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸಬಲ್ಲ ಬೃಹತ್ ಪಾರ್ಕಿಂಗ್ ಸ್ಥಳವನ್ನು ಒಳಗೊಂಡಿರಲಿದೆ. ಬಾರ್, ರೆಸ್ಟೋರೆಂಟ್‌ಗಳು ಇರಲಿವೆ.


Click below to Share News

Leave a Reply

Your email address will not be published. Required fields are marked *

Back to top button
error: Content is protected !!