ಕ್ರೀಡೆ

ಮೊಹಮ್ಮದ್ ಶಮಿ ದಾಳಿಗೆ ಲಂಕಾ ಭಸ್ಮ – 302 ರನ್‌ಗಳ ಭರ್ಜರಿ ಜಯಭೇರಿ ಬಾರಿಸಿದ ಟೀಮ್ ಇಂಡಿಯಾ.

Click below to Share News

ಮುಂಬೈ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (Word Cup Cricket) ಭಾರತದ (Team India) ಅಜೇಯ ಓಟ ಮುಂದುವರಿದಿದ್ದು ಸೆಮಿಫೈನಲ್‌ ಪ್ರವೇಶಿಸಿದೆ.

ಶ್ರೀಲಂಕಾ (Sri Lanka) ವಿರುದ್ಧ ಭರ್ಜರಿ 302 ರನ್‌ಗಳಿಂದ ಜಯಗಳಿಸಿದ ಭಾರತ ಸೆಮಿಫೈನಲ್‌ (Semi Final) ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟಾಸ್‌ ಸೋತು ಬ್ಯಾಟ್‌ ಮಾಡಿದ ಭಾರತ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕದ ಆಟದಿಂದ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಲಂಕಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.4 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು.
ಶ್ರೀಲಂಕಾ 3 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ತಂಡದ 4 ಮಂದಿ ಆಟಗಾರರು 0 ಸುತ್ತಿದ್ದರು. ಇತರ ರೂಪದಲ್ಲಿ 10 ರನ್‌( 5 ಬೈ, 1 ಲೆಗ್‌ಬೈ, 4 ವೈಡ್‌) ಬಂದ ಕಾರಣ ಲಂಕಾದ ಸ್ಕೋರ್‌ 50 ರನ್‌ ಗಡಿ ದಾಟಿತ್ತು.

ಶಮಿ (Mohammed Shami) ಮಾರಕ ಬೌಲಿಂಗ್‌ ಮಾಡಿ 5 ವಿಕೆಟ್‌ ಕಿತ್ತರೆ ಸಿರಾಜ್‌ 3 ವಿಕೆಟ್‌ ಪಡೆದರು. ಬುಮ್ರಾ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್‌ ಕಿತ್ತರು.
ಕಳಪೆ ಫೀಲ್ಡಿಂಗ್‌:
ಭಾರತ 300 ರನ್‌ ಗಳಿಸಲು ಶ್ರೀಲಂಕಾ ತಂಡದ ಆಟಗಾರರೇ ಕಾರಣ. ಸುಲಭದ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರು. ಇದರ ಸಂಪೂರ್ಣ ಲಾಭವನ್ನು ಭಾರತದ ಬ್ಯಾಟರ್‌ಗಳು ಪಡೆದುಕೊಂಡರು.

ರೋಹಿತ್‌ ಶರ್ಮಾ 4 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಶುಭಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ 179 ಎಸೆತಗಳಲ್ಲಿ 189 ರನ್‌ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್‌ ಕಟ್ಟಿದರು. ಶುಭಮನ್‌ ಗಿಲ್‌ 92 ರನ್‌ ( 92 ಎಸೆತ, 11 ಬೌಂಡರಿ, 2 ಸಿಕ್ಸರ್‌), ವಿರಾಟ್‌ ಕೊಹ್ಲಿ 88 ರನ್‌ ( 94 ಎಸೆತ, 11 ಬೌಂಡರಿ) ಶ್ರೇಯಸ್‌ ಅಯ್ಯರ್‌ 82 ರನ್‌ (56 ಎಸೆತ, 3 ಬೌಂಡರಿ, 6 ಸಿಕ್ಸರ್‌) ರವೀಂದ್ರ ಜಡೇಜಾ 35 ರನ್‌ ( 24 ಎಸೆತ, 1 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.


Click below to Share News

Leave a Reply

Your email address will not be published. Required fields are marked *

Back to top button
error: Content is protected !!