ತಾಲೂಕು ಸುದ್ದಿ

ಕಲಾತಪಸ್ವಿ ಸಾಂಸ್ಕೃತಿಕ ತಂಡ ಆಯೋಜನೆ ಮಾಡಿದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆಯ ಫಲಿತಾಂಶ ಘೋಷಣೆ.

Click below to Share News

ಮಂಗಳೂರು: ಕಲಾತಪಸ್ವಿ ಸಾಂಸ್ಕೃತಿಕ ತಂಡ ಆರಂಭವಾದ ಒಂದೇ ವರ್ಷದಲ್ಲಿ ವಿನೂತನವಾದ ಕಾರ್ಯಕ್ರಮಗಳು,ಸೇವಾ ನಿಧಿ ಯೋಜನೆಗಳು, ವಿವಿಧ ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಯಶಸ್ವಿ ಒಂದು ಕಲಾತಂಡ.

ಸುಮಾರು 40 ರಿಂದ 50ಯುವ ಪ್ರತಿಭೆಗಳನ್ನು ಒಳಗೊಂಡ ಈ ತಂಡ ಪ್ರತಿ ತಿಂಗಳು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಕಲಾಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳಲು ಯಶಸ್ವಿಯಾಗಿದೆ. ಕಲಾತಪಸ್ವಿ ಸಂಸ್ಕೃತಿಕ ತಂಡ ಯುವ ಪ್ರತಿಭೆಗಳಿಗೋಸ್ಕರ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿತ್ತು. ಆ ಸಾಲಿಗೆ ಇನ್ನೊಂದು ಸೇರ್ಪಡೆ ಎಂಬಂತೆ ಆಗಸ್ಟ್ ತಿಂಗಳಿನಲ್ಲಿ “ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ -2023”. ಆನ್ಲೈನ್ ಸ್ಪರ್ಧೆ ಆಯೋಜನೆ ಮಾಡಿದ್ದು 50ದಿನಗಳ ಕಾಲ ಸಾಗಿದ ಈ ಸ್ಪರ್ಧೆಯಲ್ಲಿ ರಾಜ್ಯದ 15 ಜಿಲ್ಲೆಗಳಿಂದ ಒಟ್ಟು 456 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆ ರಾಜ್ಯಮಟ್ಟದಲ್ಲಿ ಸುದ್ದಿಯನ್ನು ಮಾಡಿತ್ತು.

ನಕ್ಷತ್ರ ಮಂಗಳೂರು
ವೇದಾಂತ್ ಬಂಟ್ವಾಳ
ಶಿವಾಂಕ್ ಮಂಗಳೂರು

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ನಕ್ಷತ್ರ ಮಂಗಳೂರು, ದ್ವಿತೀಯ ಸ್ಥಾನ ವೇದಾಂತ್ ಬಂಟ್ವಾಳ ಮತ್ತು ತೃತೀಯ ಸ್ಥಾನ ಶಿವಾಂಕ್ ಮಂಗಳೂರು ಪಡೆದು ಕೊಂಡಿರುತ್ತಾರೆ.
ವಿಜೇತರಿಗೆ ಬಹುಮಾನ ರೂಪವಾಗಿ ನಗದು, ಶ್ರೀಕೃಷ್ಣ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಸೆ.19 ರಂದು ಕಂಬಳಬೆಟ್ಟು -ಧರ್ಮನಗರದಲ್ಲಿ ನಡೆಯಲಿರುವ 52ನೇ ವರ್ಷದ ಶ್ರೀ ಮಹಾಗಣೇಶೋತ್ಸವದ ವೇದಿಕೆಯಲ್ಲಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!