ತಾಲೂಕು ಸುದ್ದಿ
ಪರಸ್ಪರ ಮುಖಾಮುಖಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ – ಡಾ . ಪ್ರಭಾಕರ್ ಭಟ್
ಪುತ್ತೂರು : ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ . ಪ್ರಭಾಕರ್ ಭಟ್ ಪರಸ್ಪರ ಮುಖಾಮುಖಿಯಾದ ಪ್ರಸಂಗ ನಡೆದಿದೆ .
ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ . ಪ್ರಭಾಕರ್ ಭಟ್ ಮುಖಾಮುಖಿಯಾಗಿದ್ದು . ಈ ವೇಳೆ ಕೈ ಮುಗಿದು ನಮಸ್ಕರಿಸಿದ ಅರುಣ್ ಕುಮಾರ್ ಪುತ್ತಿಲ, ಡಾ.ಪ್ರಭಾಕರ್ ಭಟ್ ಅವರ ಕಾಲಿಗೆ ಪ್ರಣಾಮ ಸಲ್ಲಿಸಿ ಆಶೀರ್ವಾದ ಪಡೆದು ಕುತೂಹಲ ಮೂಡಿಸಿದ್ದಾರೆ, ಇದಕ್ಕೆ ಪ್ರತಿ ಉತ್ತರ ಎಂಬಂತೆ ಡಾ ಡಾ.ಪ್ರಭಾಕರ್ ಭಟ್ ಅವರ ಬೆನ್ನು ತಟ್ಟಿ ಅನುಗ್ರಹಿಸಿದ ಊಟ ಆಯ್ತ ಎಂದು ಕೇಳುವ ಮೂಲಕ ಕುಶಲ ವಿಚಾರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.