ತಾಲೂಕು ಸುದ್ದಿ

ಬಲ್ನಾಡು : ಫೆ.01-ಫೆ 04ರವರೆಗೆ ಕಾಡ್ಲ ವೈಕುಂಠಪುರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮತ್ತು ಒತ್ತೆಕೋಲ.

Click below to Share News

ಬಲ್ನಾಡು : ಕಾಡ್ಲ ವೈಕುಂಠಪುರದ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಫೆ.01 ರಿಂದ ಫೆ 04ರವರೆಗೆ ಪೆಲಡ್ಡತ್ತಾಯ ಭಂಡಾರಿ ಮತ್ತು ಶ್ರೀ ಧೂಮವತಿ ಕುಪ್ಪೆಟ್ಟು ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮತ್ತು ಶ್ರೀ ವಿಷ್ಣುಮೂರ್ತಿದೈವದ ಒತ್ತೆಕೋಲ ನಡೆಯಲಿದೆ.

ಫೆ.01ರಂದು ಬೆಳಗ್ಗೆ ಗಣಪತಿ ಹವನ, ನಾಗದೇವರು ರಕೇಶ್ವರಿ ಗುಳಿಗ ರಕ್ಷಸ್ ಸಾನಿಧ್ಯದಲ್ಲಿ ತಂಬಿಲ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಫೆ 02ರಂದು ಸಂಜೆ ಧೂಮವತಿ, ಪೆಲಡ್ಕತ್ತಾಯ ಭಂಡಾರಿ, ಕುಪ್ಪೆಟ್ಟು ಪಂಜುರ್ಲಿ ದೈವಗಳ ಭಂಡಾರ ಇಳಿಸಿ, ರಾತ್ರಿ ಪುದಕ್ಕೋಲ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು, ರಾತ್ರಿ 9.30ರಿಂದ ಕುಪ್ಪೆಟ್ಟು ಪಂಜುರ್ಲಿ ದೈವದ ಕೋಲ ಹಾಗೂ ಪೆಲಡ್ಕತ್ತಾಯ ಭಂಡಾರಿ ದೈವದ ಕೋಲ ನಡೆಯಲಿದೆ.

ಫೆ.03ರಂದು ಬೆಳಿಗ್ಗೆ ಧೂಮವತಿ ದೈವದ ನೇಮ, ಸಂಜೆ 6ಗಂಟೆಗೆ ಒತ್ತೆಕೋಲದ ಕರ್ಮಿಗಳಿಗೆ ಎಣ್ಣೆಬೂಳ್ಯ ಕೊಡಲಾಗುವುದು, ರಾತ್ರಿ 7.00ಗಂಟೆಗೆ ವಿಷ್ಣುಮೂರ್ತಿ ದೈವದ ಭಂಡಾರ ಇಳಿಸಿ, 7.30ಕ್ಕೆ ತೊಡಂಗೈಲ್, ಮೇಲೇರಿಗೆ ಅಗ್ನಿ ಸ್ಪರ್ಶ ನೀಡಲಾಗುತ್ತದೆ.
ರಾತ್ರಿ 8.000ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಬಳಿಕ ಸಾಜ ಶಾಲಾ ಮಕ್ಕಳಿಂದ ಮತ್ತು ಊರವರಿಂದ ಏನ್ ವಿ ಡಾನ್ಸ್ ಪುತ್ತೂರು ಇವರಿಂದ ನೃತ್ಯ ವೈಭವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11ರಿಂದ ಕುಲ್ಟಾಟ ಹಾಗೂ ರಾತ್ರಿ 1.00ಗಂಟೆಗೆ ಊರನ ಪ್ರಸಿದ್ಧ ಕಲಾವಿದರಿಂದ ವೀರಮಣಿ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬೆಳಿಗ್ಗೆ 4.00ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಅಗ್ನಿಸೇವೆ ನಡೆಯಲಿದೆ. ಫೆ.04ರಂದು ಬೆಳಿಗ್ಗೆ ಮಾರಿಕಲ, ಅರಶಿನ ಪ್ರಸಾದ ಹಾಗೂ ಬೆಳಗ್ಗೆ 9ಗಂಟೆಗೆ ಗುಳಿಗ ದೈವದ ಕೋಲ ನಡೆಯಲಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!