ತಾಲೂಕು ಸುದ್ದಿ

ದೊಡ್ಡಡ್ಕ,ಮಾ.10 : ಜಿ ಕೆ ಬ್ರದರ್ಸ್ ದೊಡ್ಡಡ್ಕ ಇದರ ಆಶ್ರಯದಲ್ಲಿ ” ದೊಡ್ಡಡ್ಕ ಪ್ರೀಮಿಯರ್ ಲೀಗ್ -ಸೀಸನ್ 2″ ಕ್ರಿಕೆಟ್ ಪಂದ್ಯಾಟ

Click below to Share News

ದೊಡ್ಡಡ್ಕ : ಜಿ ಕೆ ಬ್ರದರ್ಸ್ ದೊಡ್ಡಡ್ಕ ಇದರ ಆಶ್ರಯದಲ್ಲಿ ” ದೊಡ್ಡಡ್ಕ ಪ್ರೀಮಿಯರ್ ಲೀಗ್ -ಸೀಸನ್ 2″ ಐದು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮಾ.10ರಂದು ಸಾಜ ಶಾಲಾ ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 8ಕ್ಕೆ ಬೆಳಿಯೂರುಕಟ್ಟೆ ಸ.ಪ. ಪೂ ಕಾಲೇಜಿನ ಸ್ಥಾಪಕಧ್ಯಕ್ಷರಾದ ಬಾಲಕೃಷ್ಣ ರೈ ಮುಗೆರೋಡಿ ಅವರ ದಿವ್ಯಹಸ್ತದಲ್ಲಿ ಪಂದ್ಯಕೂಟದ ಉದ್ಘಾಟನೆ ನಡೆಯಲಿದೆ, ಕಾರ್ಯಕ್ರಮ ಸಭಾಧ್ಯಕ್ಷರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ, ಹಾಗೂ ಮುಖ್ಯ ಅತಿಥಿಗಳಾಗಿ ಪೃಥ್ವಿ ರಾಜ್ ಗೆಣಸಿನಕುಮೇರು,ಯೂಸುಪ್ ಗೌಸಿಯಾ ಸಾಜ,ಹರೀಶ್ ಪೂಜಾರಿ, ಅಬ್ರೋಸ್ ಡಿಸೋಜ, ಶಶಿಕಾಂತ್, ಶ್ರೀ ಸಂಜೀವ ಪೂಜಾರಿ ದೊಡ್ಡಡ್ಕ, ಹರಿಪ್ರಕಾಶ್ ಬೈಲಾಡಿ,  ಚಿದಾನಂದ ಸುವರ್ಣ, ಗೆಣಸಿನ ಕುಮೇರು, ಇಗ್ನಸ್ ಡಿ’ಸೋಜಾ ದೊಡ್ಡಡ್ಕ, ಪರಮೇಶ್ವರಿ ಭಟ್ ಬಬ್ಬಿಲಿ, ಗೀತಾ ಭಂಡಾರಿ, ರವಿಚಂದ್ರ ಸಾಜ,ವಿಷ್ಣು ಕುಮಾರ್, ವಸಂತಿ ಹರೀಶ್ ಪೂಜಾರಿ ಹಸಂತಡ್ಕ, ಶೋಭಾ ಮುರುಂಗಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕ್ರೀಡಾ ಸಾಧಕರಿಗೆ ಸನ್ಮಾನ.
ಜೂನಿಯರ್ ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ ಮಟ್ಟವನ್ನು ಪ್ರತಿನಿಧಿಸಿದ ರಜತ್ ರೈ, ವಾಲಿಬಾಲ್ ಆಟಗಾರ ಮೊಹಮ್ಮದ್ ಹಾಜಿಮ್ ಬಲ್ನಾಡು, ಆತ್ಲೆಟಿಕ್ ಕ್ರೀಡಾಪಟು ಕೃತಿ ಗುಮ್ಮಟಗದ್ದೆ ಇವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭ.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಭಾಧ್ಯಕ್ಷತೆಯಲ್ಲಿ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಬೊಟ್ಯಾಡಿ,ಚನಿಲ ತಿಮ್ಮಪ್ಪ ಶೆಟ್ಟಿ, ಮುರಳಿ ಕೃಷ್ಣ ಭಟ್ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ,ಗಣೇಶ್ ಭಟ್ ಸುದನಡ್ಕ, ಸುಬ್ರಮಣ್ಯ ಬಲ್ಯಾಯದೊಡ್ಡಡ್ಕ,ಜಗದೀಶ್ ಭಂಡಾರಿ, ಅಕ್ಷಯ್ ರೈ ಸಾರ್ಯ,ಅಕ್ಷತ್ ಜಿ ಕೆ,ಮಹಮ್ಮದ್ ರಿಯಾಜ್ ಪರ್ಲಡ್ಕ, ಶರೀಪ್ ರಾಯಲ್, ಹಮೀದ್ ಸಾಜ ಮತ್ತು ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಐದು ತಂಡಗಳ ಲೀಗ್ ಮಾದರಿಯ ಪಂದ್ಯಾಟ ನಡೆಯಲಿದ್ದು, ಪ್ರಥಮ ಸ್ಥಾನ ಗಳಿಸಿ ತಂಡಕ್ಕೆ ರೂ 15,024 ಹಾಗೂ ಡಿಪಿಲ್ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ 8,024 ಮತ್ತು ಡಿಪಿಲ್ ಟ್ರೋಫಿ ಮತ್ತು ವ್ಯಕ್ತಿತ ಬಹುಮಾನ ನೀಡಿ ಗೌರವಿಸಲಾಗುವುದು ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಊಟದ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!