ತಾಲೂಕು ಸುದ್ದಿ

ಇರ್ದೆ:ಏ.06 : ಶ್ರೀ  ವಿಷ್ಣುಮೂರ್ತಿ ದೇವಸ್ಥಾನದಲ್ಲಿ 20 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ.

Click below to Share News

ಇರ್ದೆ (ಏ.06): ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶ್ರೀ ವಿಷ್ಣುಮೂರ್ತಿ  ದೇವಾಲಯ ಇರ್ದೆ ಇದರ ಅಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಬಂದು, ಸ್ವ ಸಹಾಯ ಸಂಘಗಳ ಒಕ್ಕೂಟ, ದೂಮಡ್ಕ, ಪೆರಲ್ತಡ್ಕ, ಗುಮ್ಮಟಗದ್ದೆ, ಅಜ್ಜಿಕಲ್ಲು, ಅಜಲಡ್ಕ, ರೆಂಜ, ಕಕ್ಕೂರು, ಚೂರಿಪದವು  ಇದರ ಸಹಕಾರದೊಂದಿಗೆ

ಪರಮಪೂಜ್ಯ ಡಾ! ಡಿ. ವೀರೇಂದ್ರ ಹೆಗ್ಡೆ ಯವರ ಮತ್ತು ಮಾತೃ ಶ್ರೀ ಹೇಮಾವತಿ ಹೆಗ್ಡೆ ಯವರ ಕೃಪಾಶಿರ್ವಾಗಳೊಂದಿಗೆ, ಶ್ರೀ ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯ ದಲ್ಲಿ  20ನೇ ವರ್ಷದ ಸಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ನಡೆಯಿತು, ಈ ಪೂಜಾ ಕಾರ್ಯದಲ್ಲಿ  ಎಲ್ಲಾ ಒಕ್ಕೂಟ ಸದಸ್ಯರು, ಪದಾಧಿಕಾರಿಗಳು, ದೇವಾಲಯದ ಆಡಳಿತ ಮಂಡಳಿ, ಸ್ವಯಂ ಸೇವಕರು, ಸೇವಾಪ್ರತಿನಿಧಿಯವರು, ವಲಯ ಮೇಲ್ವಿಚಾರಕರು ಭಾಗವಹಿಸಿದರು.

ಅನ್ನ ಸಂತರ್ಪಣೆ ಕಾರ್ಯದಲ್ಲಿ ಇರ್ದೆ ಬೆಟ್ಟoಪಾಡಿ ವಿಪತ್ತು ನಿರ್ವಹಣಾ ಘಟಕ ಸಹಕರಿಸಿತ್ತು.

ವರದಿ -ಆನಂದ್ ಕಲೆಂಜಿಲ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!