ತಾಲೂಕು ಸುದ್ದಿ

ಪುತ್ತೂರು : ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಟಾರ್ಗೆಟ್ 2 ಸಕ್ಸಸ್ ಟ್ರೇಡಿಂಗ್ ವ್ಯವಹಾರ ಸಂಸ್ಥೆಯಿಂದ ವಂಚನೆ ಆರೋಪ

Click below to Share News

ಪುತ್ತೂರು: ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಪಿಎಂಸಿ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಮೆಚೂರ್ ಆಗಿರುವ ಠೇವಣಿಗಳಿಗೆ ಸ೦ಬ೦ಧಿಸಿ ಹಣ ಹಿ೦ದಿರುಗಿಸದೆ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಗ್ರಾಹಕರು ಮತ್ತು ಸಿಬ್ಬಂದಿಗಳು ಸೇರಿ ಸಂಸ್ಥೆಯ ಅಧ್ಯಕ್ಷರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಆ.4ರಂದು ನಡೆದಿದೆ. ವಂಚನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘವು ಗ್ರಾಹಕರಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಒಳಮೊಗ್ರು ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಂಸ್ಥೆಯ ಅಧ್ಯಕ್ಷ ಗಿರೀಶ್ ರೈ ಎಂಬವರು ಗ್ರಾಹಕರಿಂದ ಡೆಪೋಸಿಟ್ ಪಡೆದು ಅದನ್ನು ಹಿಂದಿರುಗಿಸದ ವಂಚನೆ ಮಾಡಿದ್ದಾರೆ ಇದರ ಜೊತೆಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಷರತ್ತು ವಿಧಿಸಿ ಅವರಿಂದಲೂ ಅತ್ಯಧಿಕ ಮೊತ್ತದ ಡೆಪೋಸಿಟ್ ಪಡೆದುಕೊಂಡಿದ್ದಾರೆ ಆದರೆ ಸಿಬ್ಬಂದಿಗಳಿಗೆ ಸರಿಯಾದ ವೇತನ ನೀಡಗೆ ಸಂಸ್ಥೆಯಲ್ಲಿ ಇಟ್ಟಿರುವ ಡೆಪೋಸಿಟ್ ಹಣವನ ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ತಲೆಮರೆಸಿಕೊಂಡಿದ್ದ ಅಧ್ಯಕ್ಷ: ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ರೈ ಎಂಬವರು ಹಲವು ಸಮಯಗಳಿಂದ ತಲೆಮರೆಸಿಕೊಂಡಿದ್ದರು ಎಂದುಗ್ರಾಹಕರು ಮತ್ತು ಸಿಬ್ಬಂದಿಗಳು ಅವರ ಪತ್ತೆಗಾಗಿ ಕಾಯುತ್ತಿದ್ದರು.ಆ 04ರಂದು ಅವರು ಪುತ್ತೂರು ಐಸಿಐಸಿಐ ಬ್ಯಾಂಕ್‌ಗೆ ಬಂದಿದ್ದಾರೆಂಬ ಮಾಹಿತಿ ಪಡೆದು ಅಲ್ಲಿಗೆ ಆಗಮಿಸಿದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಸುತ್ತುವರಿದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಠಾಣೆ,ಮುಂದೆ ಜಮಾಯಿಸಿದ ಜನರು

ಬ್ಯಾಂಕ್‌ನ ಅಧ್ಯಕ್ಷ ಗಿರೀಶ್ ರೈ ಅವರನ್ನು ಠಾಣೆಗೆ ಕರೆದೊಯ್ದ ಮಾಹಿತಿ ತಿಳಿಯುತ್ತಲೇ, ಹಣ ಕಳೆದುಕೊಂಡಿದ್ದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಠಾಣೆಯ ಮುಂದೆ ಜಮಾಯಿಸಿ ತಾವು ಮೋಸ ಹೋಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.
ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಿಬ್ಬಂದಿಗಳು, ಗ್ರಾಹಕರು

ಕ್ಯಾಶಿಯರ್ ಆಗಿ ಅಪಾಯಿಂಟ್‌ಮೆಂಟ್ ಮಾಡಬೇಕಾದರೆ ರೂ.5 ಲಕ್ಷ ಪೋಸಿಟ್ ಇಡಬೇಕೆಂಬ ಷರತ್ತು ವಿಧಿಸಿದಂತೆ ಕವಿತಾ ಎಂಬವರು ಪರಿಚಯಸ್ಥರ ಮೂಲಕ ರೂ.5 ಲಕ್ಷ ಮತ್ತು ತನ್ನ ಸ್ವಂತದ್ದೆಂದು ರೂ.50 ಸಾವಿರವನ್ನು ಡೆಪೋಸಿಟ್ ಇಟ್ಟಿದ್ದರು.ಹರ್ಷಿತಾ ಎಂಬವರು ಕ್ಲರ್ಕ್ ಹುದ್ದೆಗೆ ರೂ.1 ಲಕ್ಷ, ಗೋಪಾಲಕೃಷ್ಣ ಪಂಜ ಎಂಬವರು ರೂ.1 ಲಕ್ಷ, ಹರೀಶ್ ಎಂಬವರು ಅವರ ತಂಗಿಯ ಹೆಸರಿನಲ್ಲಿ ರೂ.1 ಲಕ್ಷ, ದೀಕ್ಷನ್ ಎಂಬವರು ರೂ.1 ಲಕ್ಷ, ನಾರಾಯಣ ಎಂಬವರು ಲಕ್ಷಾಂತರ ರೂಪಾಯಿ ಹೀಗೆ ಹಲವಾರು ಮಂದಿ ತಾವು ಡೆಪೋಸಿಟ್ ಇಟ್ಟು ಮೋಸಹೋಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಮುಂದೆ ಅವಲತ್ತುಕೊಂಡರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!