ತಾಲೂಕು ಸುದ್ದಿ
ಪುತ್ತೂರು : ಕೆಮ್ಮಾಯಿ ಬಳಿ ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಮೃತ್ಯು..!!!
ಪುತ್ತೂರು : ಬೈಕ್ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸೇಡಿಯಾಪು ನಿವಾಸಿ ಚೈತೇಶ್ ಯಾನೆ ಚರಣ್ (19) ಮೃತ ಬೈಕ್ ಸವಾರ.
ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಟರ್ನ್ ಮಾಡುವ ವೇಳೆ ಬೈಕ್ ಅನ್ನು ವಾಲಿಸಿದ್ದು, ಈ ವೇಳೆ ಡಿವೈಡರ್ ನ ಕಂಬ ಬೈಕ್ ಸವಾರನ ತಲೆಗೆ ತಾಗಿದೆ. ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಚೈತ್ರೇಶ್ ಹೊಸ Yamaha R15 ಬೈಕ್ ಖರೀದಿಸಿ ಕೇವಲ ಒಂದು ತಿಂಗಳಷ್ಟೇ ಆಗಿದೆನ್ನಲಾಗಿದೆ.