ತಾಲೂಕು ಸುದ್ದಿ

ಪುತ್ತೂರು : KMF ಹಾಲು ಸಂಸ್ಕರಣ ಘಟಕಕ್ಕೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಸರಕಾರದ ಆದೇಶ.

Click below to Share News

ಪುತ್ತೂರು: 2 ಸಾವಿರಕ್ಕೂ ಮಿಕ್ಕಿ ಉದ್ಯೋಗ ಕಲ್ಪಿಸುವ ಕೆ ಎಂ ಎಫ್ ನ ಹಾಲು ಸಂಸ್ಕರಣ ಘಟಕಕ್ಕೆ ಅಗತ್ಯ ಜಮೀನು ಮಂಜೂರು ಮಾಡುವ ಕಾರ್ಯ ಪುತ್ತೂರು ಶಾಸಕ ಅಶೋಕ್ ರೈಯವರ ಅವಿರತ ಪ್ರಯತ್ನದ ಫಲದಿಂದ ಆಗಿದೆ.

ಚಿಕ್ಕಮುಡ್ನ್ರೂರು ಗ್ರಾಮದಲ್ಲಿ ಮಂಗಳೂರು ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ 10.10ಎಕರೆ ಜಮೀನು ಮಂಜೂರು ಮಾಡುವಂತೆ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ದ. ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಕೆ ಎಂಫ್ ನ ಹಾಲಿನ ಘಟಕವನ್ನು ಪುತ್ತೂರಲ್ಲಿ ಸ್ಥಾಪಿಸಿ ಆ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಅಶೋಕ್‌ ರೈ ನೀಡಿದ್ದರು. ಅದರ ಪ್ರಾರಂಭಿಕ ಹಂತವಾಗಿ ಜಮೀನು ಮಂಜೂರು ಪ್ರಕ್ರಿಯೆಗೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ
ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿಯಮಿತಕ್ಕೆ ಹಾಲು ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶಕ್ಕಾಗಿ ಚಿಕ್ಕಮುಡ್ನ್ರೂರು ಗ್ರಾಮದ ಸರ್ವೇ ನಂಬರ್ 41/1ರಲ್ಲಿ 10 ಎಕರೆ 10 ಸೆಂಟ್ಸ್ ವಿಸ್ತೀರ್ಣದ ಜಮೀನಿದೆ. ಈ ಪೈಕಿ 9.20 ಎಕರೆ ಕುಮ್ಮಿಯಾಗಿದೆ. ಈ ಜಮೀನಿನ ಕುರಿತಾಗಿ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರದ ಕಾರಣ ಕುಮ್ಮಿ ವಿರಹಿತ ಗೊಳಿಸಿ ಮಾರುಕಟ್ಟೆ ಮೌಲ್ಯದ ಶೇ.50 ರಷ್ಟು ವಿಧಿಸಿ ಮಂಜೂರು ಮಾಡಲು ಸರ್ಕಾರ ಅನುಮತಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಡತದ ಬೆನ್ನು ಬಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೇವಲ 6 ತಿಂಗಳ ಅವಧಿಯಲ್ಲಿ ಜಮೀನು ಮಂಜೂರು ಮಾಡುವಲ್ಲಿ ಸಫಲರಾಗಿದ್ದಾರೆ.

ಶಾಸಕ ಅಶೋಕ್ ರೈ, ಮಾತನಾಡಿದ ಮುಂದಿನ ದಿನಗಳಲ್ಲಿ ಮಂಗಳೂರಿನ ಕೆಎಂಎಫ್ ಹಾಲು ಪ್ಯಾಕೇಟ್ ಘಟಕ ಪುತ್ತೂರಿಗೆ ಸಂಪೂರ್ಣ ವರ್ಗಾವಣೆಯಾಗಲಿದೆ. ಆ ಬಳಿಕ ಸ್ಥಳೀಯರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸಿಗಲಿದೆ ಎಂದರು.

ಕೆ ಎಂ ಎಫ್ ಹಾಲಿನ ಘಟಕ ವರ್ಗಾವಣೆಯಾಗಬೇಕಾದರೆ ಅದಕ್ಕೆ 10 ಎಕ್ರೆ ಮೇಲ್ಪಟ್ಟು ಜಮೀನಿನ ಅವಶ್ಯಕತೆಯಿದೆ. ಆಗ ಮಂಜೂರು ಆಗಿರುವ ಜಾಗಕ್ಕೆ ಹೊಂದಿಕೊಂಡಂತಿರುವ 4 ಎಕ್ರೆ ಖಾಸಗಿ ಜಾಗವಿದೆ. ಕೆಎಂಎಫ್ ಸಭೆಯಲ್ಲಿ ಅಂಗೀಕರಿಸಿದ ನಂತರ ಈ ಜಮೀನನ್ನು ಕೂಡ ಕೆ ಎಂ ಎಫ್ ಖರೀದಿ ಮಾಡಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಸಾವಿರಾರು ಉದ್ಯೋಗ ಸೃಷ್ಟಿಸುವ ಹಾಲು ಪ್ಯಾಕೇಟ್ ಘಟಕ ನಿರ್ಮಿಸಲು ಹಲವು ವರ್ಷಗಳ ಪ್ರಯತ್ನದಿಂದ ಆಗದ ಕೆಲಸವನ್ನು ಅಶೋಕ್‌ ಕುಮಾರ್ ರೈ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಕೆಎಂಎಫ್ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!